ADVERTISEMENT

ಅನಗತ್ಯ ಪರಿಷೆ

ಪ್ರಕಾಶ್‌ ಕಾಕಲ್‌, ಹೆಗ್ಗೋಡು
Published 13 ಜನವರಿ 2016, 19:30 IST
Last Updated 13 ಜನವರಿ 2016, 19:30 IST

ಬೆಂಗಳೂರಿನಲ್ಲಿ ನಡೆಯುವ ಎರಡು ಪ್ರಸಿದ್ಧ ಪರಿಷೆಗಳಲ್ಲಿ ಒಂದು, ಬಸವನಗುಡಿಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆ ಮತ್ತೊಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಪುಸ್ತಕ ಪರಿಷೆ.  ಕಡ್ಲೆಕಾಯಿ ಪರಿಷೆ ಎಷ್ಟೋ ಬಡ ವ್ಯಾಪಾರಸ್ಥರಿಗೆ ದುಡಿಮೆಗೆ ಅವಕಾಶ ನೀಡುತ್ತದೆ.

ಭಾರತದ ಸಂಸ್ಕೃತಿಯನ್ನು ಬಿಂಬಿಸುವ, ಆ ಮೂಲಕ ರೈತರು ಬೆಳೆದ ‘ಬಡವರ ಬಾದಾಮಿ’  ಕಡ್ಲೆಕಾಯಿಯನ್ನು ಜನರಿಗೆ ತಲುಪಿಸುವ ಇಂತಹ ಕಾರ್ಯಕ್ರಮ ಸರ್ಕಾರದ ಯಾವುದೇ ಅನುದಾನ ಪಡೆಯದೇ ವಿಜೃಂಭಿಸುತ್ತದೆ.

ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಳೆದ ಐದಾರು ವರ್ಷಗಳಿಂದ  ಸುಮಾರು ₹ 15– 20 ಲಕ್ಷ ಅನುದಾನದಲ್ಲಿ ನಡೆಯುತ್ತಿರುವ ಪುಸ್ತಕ ಪರಿಷೆ ಯಾವ ಪುರುಷಾರ್ಥಕ್ಕಾಗಿ ಎನ್ನುವ ಪ್ರಶ್ನೆಯನ್ನು ನಾಗರಿಕರು ಎತ್ತಬೇಕಾಗಿದೆ. ಒಂದು ಪೆಂಡಾಲ್, ಒಂದಷ್ಟು ಬೆಂಚು ಕುರ್ಚಿಗಳು, ಪ್ರತಿ ವರ್ಷ ರಾಶಿ ಹಾಕಿದ ಅವೇ ಹಳೆಯ ಪುಸ್ತಕಗಳ ಮೇಲೆ ಅಲ್ಲಿ ಇಲ್ಲಿ ಉಚಿತವಾಗಿ ಪಡೆದ ಒಂದಿಷ್ಟು ಹೊಸ ಪುಸ್ತಕಗಳನ್ನು ಜನರ ಕಣ್ಕಟ್ಟುವಂತೆ ಮೇಲ್ಭಾಗದಲ್ಲಿ ಹಾಕಿ ನಡೆಸುವ ಇಂತಹ ಪರಿಷೆಗಳಿಗೆ ಸರ್ಕಾರ ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡುತ್ತಿರುವುದು ಸಮಂಜಸವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.