ADVERTISEMENT

ಅಪರೂಪದ ಬಾಂಧವ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST

ಮಕ್ಕಳ ಮೇಲಿನ ವಿಪರೀತ ವ್ಯಾಮೋಹದಿಂದ ಏನನ್ನು ಬೇಕಾದರೂ ಮಾಡಲು ತಯಾರಿರುವ ತಂದೆ-ತಾಯಿಯಿರುವ ಈ ಕಾಲದಲ್ಲಿ, ಸೋದರ ಪ್ರೇಮವನ್ನು ಮರೆಯದೆ ತಮ್ಮ ಮಗನನ್ನೇ ಎದುರು ಹಾಕಿಕೊಂಡವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್.

ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗವಹಿಸದೇ ಇದ್ದರೂ, ಸಹೋದರ ಶಿವಪಾಲ್‌ ಸಿಂಗ್ ಮೇಲಿನ ಪ್ರೀತಿಯಿಂದ ಎರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ತಮ್ಮನ ಗೆಲುವಿಗೆ ಕಾರಣರಾಗಿದ್ದಾರೆ. ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪನನ್ನು ಸೋಲಿಸಲು ಶತ ಪ್ರಯತ್ನ ಮಾಡಿದರೂ, ಮುಲಾಯಂ ಅವರ ಸೋದರ ಪ್ರೇಮದಿಂದ ಅದು ವಿಫಲವಾಗಿದೆ.

ಇತ್ತೀಚಿನ ದಿನಗಳಲ್ಲಿ ಅಣ್ಣ-ತಮ್ಮಂದಿರ ನಡುವೆ ದ್ವೇಷ, ಜಗಳ, ಮತ್ಸರಗಳೇ ಹೆಚ್ಚಾಗಿರುವಾಗ, ಇದೊಂದು ಮಾದರಿ ಬಾಂಧವ್ಯವಾಗಿ ಕಾಣುತ್ತದೆ.
-ಡಾ. ಪುನೀತ್ ಕುಮಾರ್ ಎಲ್.ಎಂ., ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.