ADVERTISEMENT

ಆಕಾಂಕ್ಷಿಗಳಿಗೆ ಹಿನ್ನಡೆ

ಡಿ.ನಾಗರಾಜ, ಬೆಂಗಳೂರು
Published 2 ಆಗಸ್ಟ್ 2015, 19:30 IST
Last Updated 2 ಆಗಸ್ಟ್ 2015, 19:30 IST

ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ರೂಪಿಸಿರುವ ಕಾಯ್ದೆಯನ್ವಯ ಪ್ರಸಕ್ತ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳ ಎಂ.ಬಿ.ಬಿ.ಎಸ್‌. ಕೋರ್ಸ್‌ ಐದೂವರೆ ವರ್ಷದಿಂದ ಆರೂವರೆ ವರ್ಷಕ್ಕೆ ಹೆಚ್ಚಿದೆ!

ಗ್ರಾಮೀಣ ಪ್ರದೇಶಗಳಿಗೆ ವೈದ್ಯಕೀಯ ಸೌಲಭ್ಯವನ್ನು ಚೆನ್ನಾಗಿ ಒದಗಿಸಬೇಕು ಎಂಬ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಈ ಕಾನೂನನ್ನು ಏಕಾಏಕಿ  ಜಾರಿಗೊಳಿಸುವುದರಿಂದ ಸ್ನಾತಕೋತ್ತರ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಹಿನ್ನಡೆಯಾಗುವುದಿಲ್ಲವೆ?

ಇವರು ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವಾಗಲೇ ಆರೂವರೆ ವರ್ಷದ ಕೋರ್ಸ್‌ ಕಡ್ಡಾಯ ಎಂದು ಹೇಳಬೇಕಿತ್ತು. ಹೊಸ ಕಾಯ್ದೆಯಿಂದಾಗಿ ವಿದ್ಯಾರ್ಥಿನಿಯರಿಗೆ ಬಹಳ ತೊಂದರೆಯಾಗುತ್ತದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮುಗಿದ ನಂತರ ಮದುವೆ ಮಾಡಬೇಕಾದ ಹೊಣೆ ಪೋಷಕರಿಗೆ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳ (ವೈದ್ಯರು) ಸುರಕ್ಷತೆ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.