ADVERTISEMENT

ಆ ಮಗು...

ಎಂ.ಎಸ್‌.ರಾಮರಾಜಯ್ಯ ಮೈಸೂರು
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST

ಮಗುವೊಂದರ ಶವವನ್ನು ಸ್ವಯಂಸೇವಕ ರೊಬ್ಬರು ವಾಯುದಾಳಿಗೆ ಕುಸಿದ ಕಟ್ಟಡದಿಂದ ಹೊರಕ್ಕೆ ತರುತ್ತಿರುವ ಹೃದಯ ವಿದ್ರಾವಕ ಚಿತ್ರ ಪ್ರಕಟವಾಗಿದೆ (ಪ್ರ.ವಾ., ಜುಲೈ 18). ಆ ಮಗುವಿಗೆ 3 ಅಥವಾ ನಾಲ್ಕು ವರ್ಷವಿರ ಬಹುದು. ಐಎಸ್‌ ಉಗ್ರರ ವಿರುದ್ಧ ರಷ್ಯಾ ನಡೆಸಿದ ದಾಳಿಯಿಂದ ಕಟ್ಟಡ ಕುಸಿದು, ತನ್ನದಲ್ಲದ ತಪ್ಪಿಗಾಗಿ ಮಗು ಪ್ರಾಣವನ್ನೇ ತ್ಯಜಿಸಿದೆ.

ಮುಗ್ಧ ಮಗುವಿನ ಶವವನ್ನು ನೋಡುತ್ತಿದ್ದಂತೆ ಕಣ್ಣೀರು ಧಾರೆಯಾಗಿ ಹರಿಯಿತು. ಮತಾಂಧರಿಂದಾಗಿ ನಡೆಯುತ್ತಿರುವ ಮುಗ್ಧರ ಸಾವನ್ನು ಹೇಗೆ ತಪ್ಪಿಸುವುದು? ಎಲ್ಲ ಮತಗಳೂ
ನಾಶವಾಗಿ ಮನುಜ ಮತ ಮಾತ್ರ ಉಳಿಯುವುದು ಎಂದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.