ADVERTISEMENT

ಇದೆಂಥ ಅವೈಜ್ಞಾನಿಕ ನಿಬಂಧನೆ?

ಎಂ.ಕೆ.ಶಿವಕುಮಾರ್‌, ಭದ್ರಾವತಿ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST

ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2014ರ ಸಾಲಿನ ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಪ್ರಕಟ­ಗೊಂಡ ಪುಸ್ತಕಗಳನ್ನು ಮಾತ್ರ ಸಲ್ಲಿಸಬೇಕು ಎಂಬ ನಿಬಂಧನೆ ವಿಧಿಸಿದೆ. ಅಂದರೆ 2014ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಪ್ರಕಟಿತ ಪುಸ್ತಕಗಳ ಲೇಖಕರ ಗತಿ ಏನಾಗಬೇಕು?

ಇನ್ನೊಂದು ನಿಬಂಧನೆ ಎಂದರೆ ಗ್ರಂಥಾಲಯದಲ್ಲಿ ಮೂರು ಪ್ರತಿ ಸಲ್ಲಿಸಿ ನೋಂದಣಿ ಮಾಡಿಸಬೇಕು ಎಂಬುದು. ಈಗಾಗಲೇ ನೋಂದಣಿ ಮಾಡಿಸಿರುವವರು ಪುನಃ ನೋಂದಣಿ ಮಾಡಿಸಬೇಕೆ?

ನಾನು ಬರೆದಿರುವ ಒಂದು ಪುಸ್ತಕದಲ್ಲಿ ಮುನ್ನುಡಿ ಬರೆದಿರುವ ಕವಿಗಳು ತಾವು ಬರೆದ ದಿನಾಂಕವನ್ನು ನಮೂದಿಸಿದ್ದಾರೆ. ಅದು ಏಪ್ರಿಲ್‌ ತಿಂಗಳಿನದ್ದು. ಆ ಪುಸ್ತಕ ಸಂಪೂರ್ಣವಾಗಿ ಮುದ್ರಣಗೊಂಡು ಹೊರಬಂದಿದ್ದು ಸೆಪ್ಟೆಂಬರ್‌ನಲ್ಲಿ. ಇಂಥ ಸಮಸ್ಯೆ ನನ್ನದೊಬ್ಬನದೇ ಆಗಿರಲಾರದು. ಅಂತಹ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆ ಯಾವ ಮಾನದಂಡ ಅನುಸರಿಸುತ್ತಿದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.