ADVERTISEMENT

ಇಲಾಖೆ ಎಚ್ಚೆತ್ತುಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ಸರ್ಕಾರಿ ಯೋಜನೆಗಳನ್ನು ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಅನುಷ್ಠಾನಗೊಳಿಸಿದರೆ ಆಗುವ ಅನಾಹುತಗಳಿಗೆ ಇತ್ತೀಚಿನ ಉದಾಹರಣೆ  ಆರ್‌.ಟಿ.ಇ.

ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಯೋಜನೆಯನ್ನು ಈ ಸಾಲಿನಲ್ಲಿ ಆನ್‌ಲೈನ್‌ ಪ್ರಕ್ರಿಯೆಗೆ ಒಳಪಡಿಸಲಾಯಿತು. ಅರ್ಜಿ ಸ್ವೀಕಾರ ಹಾಗೂ ಸೀಟು ಹಂಚಿಕೆ ಇವೆರಡನ್ನೂ ಆನ್‌ಲೈನ್‌ನಲ್ಲೇ ಮಾಡಲಾಗಿತ್ತು.

ಆನ್‌ಲೈನ್‌ ಸೀಟು ಹಂಚಿಕೆ ಮಾಡಿದ ನಂತರ ಮೂಲ ದಾಖಲೆಗಳ ಪರಿಶೀಲನೆಯ ಹಂತದಲ್ಲಿ ಉಂಟಾಗಿರುವ ಗೊಂದಲಗಳಿಂದ ಪೋಷಕರು ಪೇಚಾಡುವಂತಾಗಿದೆ. ಯಾವುದೋ ಕಾರಣ ಮುಂದೊಡ್ಡಿ, ಹಂಚಿಕೆಯಾಗಿರುವ ಸೀಟುಗಳಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಅಕ್ಷಮ್ಯ, ಮಾಹಿತಿ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಶಿಕ್ಷಣ ಇಲಾಖೆಯೇ ನೇರ ಹೊಣೆ.

ಜನಸಾಮಾನ್ಯರಿಗೆ ಯೋಜನೆಯ ರೂಪುರೇಷೆಗಳನ್ನು ಸ್ಪಷ್ಟವಾಗಿ ತಿಳಿಸಿದ್ದರೆ ಇಂತಹ ಸಮಸ್ಯೆಗಳೇ ಉಂಟಾಗುತ್ತಿರಲಿಲ್ಲ. ಶಿಕ್ಷಣ ಇಲಾಖೆ ಇನ್ನಾದರೂ   ಎಚ್ಚೆತ್ತುಕೊಂಡು ಗೊಂದಲ ಬಗೆಹರಿಸಲಿ.  ಅರ್ಹರಿಗೆ ನ್ಯಾಯ ದೊರಕಲಿ.
       - ವೀರೇಶ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.