ADVERTISEMENT

ಇಲ್ಲೂ ಭ್ರಷ್ಟಾಚಾರ!

ಸತ್ಯಬೋಧ, ಬೆಂಗಳೂರು
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST

ಈಗ ಲೋಕಾಯುಕ್ತದಲ್ಲಿನ ಭ್ರಷ್ಟಚಾರ ಅನಾವರಣಗೊಳ್ಳುತ್ತಿದೆ. ಹಲವು   ಅಧಿಕಾರಿಗಳಿಂದ ಲೋಕಾಯುಕ್ತ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯ ‘ಡೀಲ್’ ನಡೆದಿದೆ  ಎಂಬ ಆರೋಪ  ಆಶ್ಚರ್ಯ ಮೂಡಿಸುತ್ತದೆ.

ಲೋಕಾಯುಕ್ತ ಕಚೇರಿಯಲ್ಲಿ ಇಂತಹ ಕೆಲಸ ನಡೆಯುತ್ತಿದ್ದರೂ ಅಲ್ಲಿಯ ನಿಷ್ಠಾವಂತ ಅಧಿಕಾರಿಗಳಿಗೂ ಸುಳಿವು ಸಿಕ್ಕಿಲ್ಲ ಎನ್ನುವುದು ಮತ್ತು ಕೆಲವು ವಕೀಲರಿಗೆ ಸ್ಪಷ್ಟ ಸುಳಿವಿದ್ದರೂ  ಅವರು ಇಷ್ಟು ದಿನ ಮೌನಪ್ರೇಕ್ಷಕರಾಗಿದ್ದುದು ಅಯೋಮಯ ಎನಿಸುತ್ತದೆ.

ಸಾವಿಲ್ಲದ  ಮನೆಯಿಂದ  ಸಾಸಿವೆ ತರುವುದು ಹೇಗೆ ಅಸಾಧ್ಯವೋ ಹಾಗೆಯೇ ಭ್ರಷ್ಟರಲ್ಲದ ಮನುಷ್ಯರೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಇಡೀ ಸಮಾಜ ಗಂಭೀರವಾಗಿ ಚರ್ಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT