ADVERTISEMENT

ಈ ಸಂಪರ್ಕ ಮೌಲಿಕ

ಎಚ್.ಎಸ್.ಮಂಜುನಾಥ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

‘ಮಿಸೈಲ್‌ ಮ್ಯಾನ್‌’ ಆಕರ್ಷಕ ವಿಶೇಷಣ. ಆದರೆ ರಾಷ್ಟ್ರಪತಿ ಹುದ್ದೆಯ ಅವಧಿ ಮುಗಿದ ಮೇಲೆ ಅಬ್ದುಲ್‌ ಕಲಾಂ ಅವರು ವಿದ್ಯಾರ್ಥಿ ಯುವಜನರೊಂದಿಗೆ ಸಂಪರ್ಕ ಸಾಧಿಸಿದ್ದು ಹೆಚ್ಚು ಮೌಲಿಕ. ಭಾರತೀಯರು ಭಾಷಣಪ್ರಿಯರು. ಚಪ್ಪಾಳೆ ತಟ್ಟುವುದರಲ್ಲಿ ಅವರ ಆಸಕ್ತಿ ಕೊನೆಗೊಳ್ಳುತ್ತದೆ. ಮೈಂಡ್‌ ನಿಜಕ್ಕೂ ಇಗ್ನೈಟ್‌ ಆದರೆ ಅದು ಸಾಹಸಮಯ ಕ್ರಿಯೆಯಲ್ಲಿ ಪರ್ಯವಸಾನವಾಗುತ್ತದೆ. ಅವರ ಮಾತುಗಳಿಂದ ಪ್ರಭಾವಿತರಾದವರಲ್ಲಿ ಹಲವರು ‘ಯಶಸ್ಸನ್ನು’ ಸಾಧಿಸಿರಬಹುದು. ಆದರೆ ಸಮಾಜಕ್ಕೆ ದೇಶಕ್ಕೆ ಉಪಯುಕ್ತವಾಗಿರುವ ಯುವಕ ಯುವತಿಯರು ಕೆಲವರಷ್ಟೆ.

ಎಚ್ಚೆನ್‌ (ಎಚ್‌. ನರಸಿಂಹಯ್ಯ) ಅವರಿಗೆ ಕಡೆಗೆ ಇದರ ಅರಿವಾಗಿತ್ತು. ಕಲಾಂ ಅವರಿಗೆ ಗೊತ್ತಿದ್ದರೂ ಅವರ ಉತ್ಸಾಹ, ಶ್ರಮ ತಗ್ಗಲಿಲ್ಲ. ಗುಣಗಾನ ಮಾಡುವುದಕ್ಕಿಂತ ಆತ್ಮಾವಲೋಕನ ಇಂದಿನ ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.