ADVERTISEMENT

ಎಟಿಎಂ ಸಮಸ್ಯೆ ಬಗೆಹರಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST

ಜನರು ಹಣಕ್ಕಾಗಿ ಸರದಿ ಸಾಲಲ್ಲಿ ನಿಂತು ಪರಿತಪಿಸಿದ  ದಿನಗಳು ಮರೆಯಾಗುತ್ತಿರುವ ಬೆನ್ನಲ್ಲೇ ಬ್ಯಾಂಕುಗಳು ವಿವಿಧ ರೀತಿಯ ಸೇವಾ ಶುಲ್ಕಗಳನ್ನು ಗ್ರಾಹಕರ ಮೇಲೆ ಹೇರತೊಡಗಿವೆ. ಈ ಹೊರೆಯ ಅಗತ್ಯ ಏನು ಎಂಬುದರ ಬಗ್ಗೆ ಯಾರೂ ಸರಿಯಾದ ವಿವರಣೆ ನೀಡುತ್ತಿಲ್ಲ.

ಇನ್ನೊಂದೆಡೆ ಬ್ಯಾಂಕಿನ ಎಟಿಎಂಗಳು ಗ್ರಾಹಕರೊಂದಿಗೆ ಆಟವಾಡುತ್ತಿವೆ. ಅನೇಕ ಎಟಿಎಂಗಳ ಆರೋಗ್ಯ ಕೆಟ್ಟಿದೆ. ಇಂತಹ ಎಟಿಎಂಗಳಿಂದ ಜನರು ಹಣ ಪಡೆಯುವ ಬದಲು ತೊಂದರೆ ಎದುರಿಸುವುದೇ ಹೆಚ್ಚು.

ಕೆಲವೊಮ್ಮೆ ಎಟಿಎಂನಲ್ಲಿ ಹಣ ಬಾರದಿದ್ದರೂ ಖಾತೆಯಲ್ಲಿ ಹಣ ಖಾಲಿಯಾಗಿರುವ  ಸೂಚನೆ ಮಾತ್ರ ಬರುತ್ತದೆ. ಇಂತಹ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೊಂದು ತಾಂತ್ರಿಕ ಸಮಸ್ಯೆ ಆಗಿರಬಹುದು. ಆದರೂ ವಿನಾಕಾರಣ ಗ್ರಾಹಕರನ್ನು ಆತಂಕಕ್ಕೆ ದೂಡುವುದು ಎಷ್ಟು ಸರಿ?

ADVERTISEMENT

ಈ ಸಮಸ್ಯೆ ಬಗ್ಗೆ ಬ್ಯಾಂಕಿನ ಆಡಳಿತ ವರ್ಗ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.  ಎಟಿಎಂಗಳ ಕಾರ್ಯಕ್ಷಮತೆ ಹೆಚ್ಚಿಸುವ ಕಡೆ ಈಗಲಾದರೂ ಗಮನಹರಿಸಲಿ.
-ಮೋಹನ್ ವೈ.ಕೆ., ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.