ADVERTISEMENT

ಎಡವಾದಿ– ಜಡವಾದಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST

ಪೇಜಾವರ ಶ್ರೀಗಳು ಇಫ್ತಾರ್ ಕೂಟ ಏರ್ಪಡಿಸಿರುವುದು 2018ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹುನ್ನಾರ
ವಿರಬಹುದೇ? ಎಂದು ಚಾವಲ್ಮನೆ ಸುರೇಶ್ ನಾಯಕ್ ಎಂಬುವರು ಸಂಶಯ ವ್ಯಕ್ತಪಡಿಸಿದ್ದಾರೆ (ವಾ.ವಾ.,  ಜುಲೈ 14). ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಚಿತ್ರ ಹಾಕಬೇಕು ಎಂಬ ನಿಲುವು ಮತ್ತಿನ್ನೇನು? ಅದೂ ಕಾಂಗ್ರೆಸ್‌ನ ಚುನಾವಣೆ ತಂತ್ರವಲ್ಲವೇ? ಇಂತಹ ‘ಅಪ್ರಾಮಾಣಿಕತೆ ಪ್ರಜಾತಾಂತ್ರಿಕ ಮೌಲ್ಯ...’ ಹೇಗಾಗುತ್ತದೆ?

‘ಮನುಷ್ಯ ಕಾಲ ಸಂದರ್ಭಗಳಲ್ಲಿ ಬದಲಾಗುತ್ತಾನೆ ಮತ್ತು ಅವನ ಧೋರಣೆಗಳು ಸ್ಥಿರವಾಗಿರದೆ ಚಲನಶೀಲವಾಗಿರುತ್ತವೆ...’ (ಚರಿತ್ರೆಯ ಭಾರ ಹೊರಬೇಕಿಲ್ಲ- ರಾಜಾರಾಮ ತೋಳ್ಪಾಡಿ, ನಿತ್ಯಾನಂದ ಶೆಟ್ಟಿ, ಪ್ರ.ವಾ., ಜುಲೈ 10) ಎಂಬುದು ವೈಜ್ಞಾನಿಕ ನಿಲುವು. ಸಮಂಜಸ
ವಾಗಿದೆ. ಚರಿತ್ರೆಯ ಭಾರ ಹೊರಬೇಕಿಲ್ಲ, ನಿಜ. ಆದರೆ ಚರಿತ್ರೆಯಿಂದ ಪಾಠ ಕಲಿತು, ವಂಚಿತರಿಗೆ ಅವಕಾಶ ಕಲ್ಪಿಸುತ್ತ ಹೋಗಬೇಕು. ಮನುಷ್ಯ ಬದಲಾಗುವುದೇ ಇಲ್ಲ ಎಂಬುದು ಕರ್ಮಠರ ವಾದ. ಬಲಪಂಥೀಯರಿಗೆ ವಾದ– ಚರ್ಚೆಗಳಲ್ಲಿ ನಂಬಿಕೆ ಇಲ್ಲವೆನ್ನುವುದಾದರೆ, ಎಡಪಂಥೀ
ಯರು ಇನ್ನೇನು? ಅವರೂ ಏಕಮುಖಿಗಳಾಗಿದ್ದಾರೆ, ಪೂರ್ವಗ್ರಹ ಪೀಡಿತರಾಗಿದ್ದಾರೆ. ಯಾಕೋ ಎಡವಾದಿಗಳು ಜಡವಾದಿಗಳಾಗುತ್ತಿದ್ದಾರೆ. ಇದೊಂದು ವಿಪರ್ಯಾಸ.

-ಗುಡಿಹಳ್ಳಿ ನಾಗರಾಜ       
 ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.