ADVERTISEMENT

ಎಲ್ಲಿದೆ ಗಂಗಾಕಲ್ಯಾಣ?

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಂಬೇಡ್ಕರ್ ನಿಗಮದ ಮೂಲಕ ಅನುಷ್ಠಾನಕ್ಕೆ ತಂದಿರುವ ‘ಗಂಗಾಕಲ್ಯಾಣ’ ಯೋಜನೆಯ ಲಾಭ ವಾಸ್ತವದಲ್ಲಿ ಅರ್ಹ ಫಲಾನುಭವಿಗಳಿಗೆ ಲಭಿಸುತ್ತಿಲ್ಲ.

ಸ್ಥಳೀಯ ಶಾಸಕರ ಹಿಂಬಾಲಕರನ್ನು ಹಿಡಿದು, ಅವರ ಮೂಲಕ ಅಧಿಕಾರಿಗಳನ್ನು ಭೇಟಿ ಆಗಿ ಕೈಬಿಸಿ ಮಾಡಿದರೆ ಮಾತ್ರ ಈ ಯೋಜನೆಗೆ ಆಯ್ಕೆ ಆಗಲು ಸಾಧ್ಯ. ಅದೂ ಶಾಸಕರು ಪ್ರತಿನಿಧಿಸುವ ಪಕ್ಷದ ವ್ಯಕ್ತಿ ಆಗಿದ್ದರೆ ಮಾತ್ರ!

ಯೋಜನೆಯ ಫಲಾನುಭವಿಯಾಗಿ ಆಯ್ಕೆ ಆದವರು ಸಹ ಒಂದರಿಂದ ಎರಡು ವರ್ಷ ಕಾಯಬೇಕು. ನಿಜವಾಗಿಯೂ ಬಡ ರೈತರ ಉದ್ಧಾರ ಆಗಬೇಕೆಂದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಮತ್ತು ಮಧ್ಯವರ್ತಿಗಳನ್ನು ದೂರವಿಡಬೇಕು.
–ರವಿಕುಮಾರ್ ಪೂಜಾರ್, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.