ADVERTISEMENT

ಏಕೀ ಮಮಕಾರ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಅಕ್ರಮ ವಲಸಿಗರಾದ ರೋಹಿಂಗ್ಯಾ ಮುಸ್ಲಿಮರ ಪರವಾಗಿ ಇತ್ತೀಚೆಗೆ ಕೆಲವರು ಬೀದಿಗೆ ಇಳಿದು, ಮಾನವೀಯತೆಯ ಭಾಷಣ ಬಿಗಿಯುತ್ತಿದ್ದಾರೆ.

ಕಾಶ್ಮೀರಿ ಪಂಡಿತರು ತಮ್ಮ ನೆಲದಲ್ಲೇ ನಿರಾಶ್ರಿತರಾದಾಗ ಇವರೆಲ್ಲಾ ಎಲ್ಲಿದ್ದರು? ಅವರೂ ಮನುಷ್ಯರಲ್ಲವೇ? ಇಂದಿಗೂ ಪಂಡಿತರು ಒಂದು ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇಂದು ಆಶ್ರಯ ಬಯಸಿ ಬರುವ ರೋಹಿಂಗ್ಯಾ ಮುಸ್ಲಿಮರು ನಾಳೆ ಸಾಮಾನ ನಾಗರಿಕ ಸೌಲಭ್ಯಗಳು, ತದನಂತರ ವಿಶೇಷ ಸವಲತ್ತುಗಳಿಗೆ ಬೇಡಿಕೆ ಇಡುತ್ತಾರೆ. ಮುಂದಿನ ದಿನಗಳಲ್ಲಿ ವೋಟ್ ಬ್ಯಾಂಕ್ ಆಗಿ ಪರಿಗಣಿತವಾಗುವ ಇವರನ್ನೆಲ್ಲಾ ರಾಜಕೀಯ ಪಕ್ಷಗಳು ತುಷ್ಟೀಕರಿಸಲು ಮುಂದಾಗಿ ದೇಶದ ಹಿತಾಸಕ್ತಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.

ರೋಹಿಂಗ್ಯಾ ಸಮುದಾಯದಲ್ಲಿ ಕೆಲವರು ಉಗ್ರರ ಸಂಪರ್ಕ ಹೊಂದಿದ್ದಾರೆ ಎಂಬ ವರದಿಗಳು ಬಂದಿವೆ. ಅದು ನಿಜವಾಗಿದ್ದರೆ ಮುಂದಿನ ದಿನಗಳಲ್ಲಿ ಅವರು ಭಾರತಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ದೇಶದ ಸುರಕ್ಷತೆಗೆ ಆದ್ಯತೆ ನೀಡಿ, ಇವರನ್ನೆಲ್ಲ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು.

ADVERTISEMENT

–ಡಾ. ಜ್ಞಾನೇಶ್ವರ ಕೆ.ಬಿ., ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.