ADVERTISEMENT

ಏಕೆ ಈ ಅಸಹಿಷ್ಣುತೆ?

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಸಿನಿಮಾವೊಂದು ನೋಡಲು ಯೋಗ್ಯವೋ ಅಲ್ಲವೋ ಎಂಬುದು ನಿರ್ಧರಿಸುವ ನೈತಿಕ ಪೊಲೀಸ್‌ಗಿರಿ ಶುರುವಾದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ?

‘ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಿನಿಯನ್ನು ತೋರಿಸಿರುವ ರೀತಿಯಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಇದೇ ಜನ ಒಬ್ಬ ಮಹಿಳೆಯ ಮೂಗು ಕತ್ತರಿಸುತ್ತೇವೆ ಎಂದು ಹೇಳಿದರೆ, ಅವರ ತಲೆಗೆ ಬಹುಮಾನ ಘೋಷಿಸಿದರೆ ಆಗ ಮಹಿಳೆಯ ಘನತೆಗೆ ಧಕ್ಕೆ ಅಗುವುದಿಲ್ಲವೇ? ಸಮಾಜದಲ್ಲಿ ಈ ಮಟ್ಟದ ಅಸಹಿಷ್ಣುತೆ ಎಷ್ಟು ಕ್ಷೇಮ?

–ಮಾನಸ ಆರ್. ಕುಲಕರ್ಣಿ
ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.