ADVERTISEMENT

ಕನ್ನಡಿಗರಿಂದಲೇ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ 2014ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸೊನೆಲ್‌ ಸೆಲೆಕ್ಷನ್‌ (ಐಬಿಪಿಎಸ್) ಮಾಡಿದ ತಿದ್ದುಪಡಿಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಇದನ್ನು ಖಂಡಿಸಿ, ಪ್ರತಿಭಟಿಸಲು ಹೊರಟ ಅಭ್ಯರ್ಥಿಗಳ ಮೇಲೆ ಕರ್ನಾಟಕ ಪೋಲಿಸರೇ ಲಾಠಿ ಬೀಸಿದ್ದಾರೆ.

ಕನ್ನಡ ಅಭ್ಯರ್ಥಿಗಳ ಪರ ವಹಿಸಬೇಕಾಗಿದ್ದ ಸರ್ಕಾರ ಹಾಗೂ ರಾಜಕೀಯ ನಾಯಕರು ಮಾತ್ರ ಈ ಸಮಸ್ಯೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ಇತರ ಅನಗತ್ಯ ವಿಷಯಗಳನ್ನು ಕೆದಕುತ್ತಾ ಕಾಲಹರಣ ಮಾಡುತ್ತಿದ್ದಾರೆ.

ಇಲ್ಲಿ ಪ್ರತಿಭಟನೆ ನಡೆದ ಕಲವೇ ಗಂಟೆಗಳಲ್ಲಿ ತನ್ನ ರಾಜ್ಯದಲ್ಲಿ ಸಭೆ ನಡೆಸಿದ ಆಂಧ್ರದ ಮುಖ್ಯಮಂತ್ರಿ, ಆಂಧ್ರದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಕರ್ನಾಟಕ ಪೋಲಿಸರನ್ನು ಆಗ್ರಹಿಸಿದ್ದಾರೆ!

ADVERTISEMENT

ಈ ವಿಚಾರದಲ್ಲಿ ನಮ್ಮ ಕೆಲವು ದೃಶ್ಯ ಮಾಧ್ಯಮಗಳು ನಿರ್ಲಕ್ಷ್ಯ ವಹಿಸಿವೆ. ಪತ್ರಿಕೆಗಳೂ ಈ ಬಗ್ಗೆ ಬೆಳಕು ಚೆಲ್ಲದಿರುವುದು ಬೇಸರದ ಸಂಗತಿ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇನ್ನೂ ಮುಂದಾದರೂ ಮಾಧ್ಯಮಗಳು ಬೆಳಕು ಚೆಲ್ಲಬೇಕು.
–ವಿಶ್ವನಾಥ ಕೆ. ಜಿ., ಎಂ.ಬಿ.ಅಯ್ಯನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.