ADVERTISEMENT

ಕನ್ನಡ ಉಳಿಸೋಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST

ಇದೊಂದು ಪ್ರಮುಖ ಸುದ್ದಿ, ಕನ್ನಡ ಅಧ್ಯಾಪಕರೆಲ್ಲ ಗಮನಿಸಲೇಬೇಕು.

ಮಲಯಾಳ ಅಧ್ಯಾಪಕರು ತಮ್ಮ ಮಕ್ಕಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳಲ್ಲಿ, ಮುಖ್ಯವಾಗಿ ಮಲಯಾಳ ಮಾಧ್ಯಮ ಶಾಲೆಯಲ್ಲಿ ಕಲಿಸಲು ಆಸಕ್ತಿ ವಹಿಸಿದ ಮತ್ತು ದೃಢ ನಿರ್ಧಾರ ಕೈಗೊಂಡ ಬಗ್ಗೆ ಮಲಯಾಳ ಪತ್ರಿಕೆಯಲ್ಲಿ ವರದಿ ಓದಿದೆ.

ನಿಜಕ್ಕೂ ತುಂಬ ಖುಷಿಯಾಯಿತು. ಅವರ ಭಾಷಾಭಿಮಾನ ನುಡಿಯಲ್ಲಿ ಮಾತ್ರವಲ್ಲ, ಕ್ರಿಯೆಯಲ್ಲೂ ಇದೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ಅಧ್ಯಾಪಕರೆಲ್ಲರಿಗೂ ಕನ್ನಡದ ಹಿರಿದಾದ ಋಣ ಇದೆ. ಹೀಗಿದ್ದರೂ ಕನ್ನಡ ಅಧ್ಯಾಪಕರ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದಾರೆ. ವಿಪರ್ಯಾಸವೆಂದರೆ ಇವರೆಲ್ಲರೂ ಕೇರಳದಲ್ಲಿ ಕನ್ನಡ ಉಳಿಸುವ ಬಗ್ಗೆ ಮಾತನಾಡುತ್ತಾರೆ.

ADVERTISEMENT

ನಾವು ಬದಲಾಗಬೇಕು, ನಾವುಂಡ ಅನ್ನದ ಋಣ ತೀರಿಸಲು ಮಾತ್ರವಲ್ಲ ನಾಳೆ ಇಲ್ಲಿ ಕನ್ನಡ ಉಳಿಸಲೂ ಕೂಡ. ನಮ್ಮ ಮಕ್ಕಳನ್ನು ಮೊದಲು ಕನ್ನಡ ಶಾಲೆಗಳಿಗೆ ಸೇರಿಸೋಣ, ನಂತರ ಕನ್ನಡ ಉಳಿಸುವ ಬಗ್ಗೆ ಮಾತನಾಡೋಣ...
-ಡಾ. ರತ್ನಾಕರ ಮಲ್ಲಮೂಲೆ, ಕಾಸರಗೋಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.