ADVERTISEMENT

ಕರುಣೆಯ ಅಂಕ ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಮೇ 2016, 19:41 IST
Last Updated 26 ಮೇ 2016, 19:41 IST

‘ಕೃಪಾಂಕ ಸಲ್ಲದು’ ಎಂಬ ಅಭಿಪ್ರಾಯ (ವಾ.ವಾ., ಮೇ 25)  ಸಂದರ್ಭೋಚಿತವಾಗಿದೆ. ಯಾವುದೇ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಂಡುಬರುವ ಪ್ರಶ್ನೆಗಳ ದೋಷಗಳು ಆಯಾ ಪರೀಕ್ಷಾ ಮಂಡಳಿಗಳ ಪ್ರಮಾದಗಳಾಗಿರುತ್ತವೆಯೇ ಹೊರತು ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳದ್ದಾಗಿರುವುದಿಲ್ಲ.

ಪರೀಕ್ಷಾ ಮಂಡಳಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ದೋಷವಿರುವ ಪ್ರಶ್ನೆಗಳಿಗೆ ಪರಿಹಾರವಾಗಿ ಪೂರ್ಣ ಪ್ರಮಾಣದ ಅಂಕಗಳನ್ನು ನೀಡಿ ಅಭ್ಯರ್ಥಿಗಳನ್ನು ತೃಪ್ತಿಪಡಿಸುವ ಪರಿಪಾಠ ಹಿಂದಿನಿಂದಲೂ ಇದೆ. ಸಾಲದೆಂಬಂತೆ ಇದಕ್ಕೆ ಕೃಪಾಂಕ ಎಂದು ಹೆಸರಿಟ್ಟಿರುವುದೂ ಅಷ್ಟೇ ಮೂರ್ಖತನದ್ದಾಗಿದೆ.

ಪರೀಕ್ಷಾ ಮಂಡಳಿಗಳೇ ತಪ್ಪು ಮಾಡಿ ಅಭ್ಯರ್ಥಿಗಳಿಗೆ ಅಂಕಗಳನ್ನು ಕರುಣಿಸುವುದೆಂದರೆ ಏನರ್ಥ? ವಿದ್ಯಾರ್ಥಿಗಳಿಗೆ ನ್ಯಾಯಸಮ್ಮತವಾದ ಅಂಕಗಳು ದೊರೆಯಬೇಕೇ ವಿನಾ ಉದಾರವಾಗಿ ಕರುಣಿಸುವ ಅಂಕಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.