ADVERTISEMENT

ಕಲುಷಿತ ನೀರಿನಿಂದ ಮುಕ್ತಿ ಕೊಡಿಸಿ

ಕಾಡನೂರು ರಾಮಶೇಷ
Published 13 ಏಪ್ರಿಲ್ 2015, 19:30 IST
Last Updated 13 ಏಪ್ರಿಲ್ 2015, 19:30 IST

ಕೆಲ ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯ ಹತ್ತಿರವೇ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಬರುವ ದೂಳು ಹಾಗೂ ಕಸದಿಂದ ವಿಕ್ಟೋರಿಯಾ ಆಸ್ಪತ್ರೆಯ ನೀರಿನ ಸಂಗ್ರಹಾಗಾರದಲ್ಲಿರುವ ನೀರು ಕಲುಷಿತಗೊಂಡಿದೆ.

ಜತೆಗೆ ದೂಳಿನಿಂದಾಗಿ ಡಯಾಲಿಸಿಸ್‌ ರೋಗಿಗಳು, ಮಕ್ಕಳ ವಾರ್ಡ್‌, ಹೆರಿಗೆ ವಾರ್ಡ್‌, ಸುಟ್ಟಗಾಯಗಳ ವಾರ್ಡ್‌ ಇನ್ನಿತರ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ  ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಆರೋಗ್ಯ  ಸಚಿವರು ಶೀಘ್ರವೇ ಕ್ರಮಕೈಗೊಳ್ಳಬೇಕಾಗಿ ವಿನಂತಿ. 

ಜತೆಗೆ ಮೆಟ್ರೊ ಸೇತುವೆ ಕೆಳಗೆ ಗಿಡ ಬೆಳೆಸುವ ಬದಲು ಜಾಹೀರಾತು, ವಾಣಿಜ್ಯ  ವ್ಯವಹಾರಗಳಿಗೆ ಆದ್ಯತೆ ನೀಡಲಾಗಿದೆ. ಕನ್ನಡದ ಕಲಾವಿದರ, ಕವಿಗಳ, ಕ್ರೀಡಾಪಟುಗಳ, ವಿಜ್ಞಾನಿಗಳ ಹೆಸರುಗಳನ್ನು ಮೆಟ್ರೊ ಸ್ಟೇಷನ್‌ಗಳಿಗೆ ನಾಮಕರಣ ಮಾಡುವತ್ತ ಮೆಟ್ರೊ ಸಂಸ್ಥೆ ಚಿಂತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.