ADVERTISEMENT

ಕಾನೂನು ಚುರುಕಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡುವ ಹೃದಯ ವಿದ್ರಾವಕ ವಿಡಿಯೊ ತುಣುಕೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದ ನನ್ನ ಎದೆ ಒಂದು ಕ್ಷಣ ನಡುಗಿಹೋಯಿತು. ಇಂತಹ ಕೃತ್ಯ ಎಸಗುವ ಪಾಪಿ ಭಯೋತ್ಪಾದಕರು ಜಗತ್ತಿಗೆ ಕಂಟಕವಾಗಿದ್ದಾರೆ.

ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆಯಾಗಿದ್ದು ಅದನ್ನು ಮಟ್ಟ ಹಾಕಲು ಧರ್ಮಭೇದ ಮರೆತು ಎಲ್ಲ ರಾಷ್ಟ್ರಗಳೂ ಕಠಿಣ ಕ್ರಮಕ್ಕೆ ಮುಂದಾಗಬೇಕು. ಅವರನ್ನು ಹಿಂಬಾಗಿಲಿನಿಂದ ಪೋಷಿಸುತ್ತಿರುವ ದೇಶಗಳಿಗೆ ಜಾಗತಿಕ ಅಸಹಕಾರದ ಮೂಲಕ ತಕ್ಕ ಪಾಠ ಕಲಿಸಬೇಕು.

1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ನೂರಾರು ಜನರ ಪ್ರಾಣಹಾನಿಗೆ ಕಾರಣನಾದ ಉಗ್ರ ಯಾಕೂಬ್‌ ಗಲ್ಲು ಶಿಕ್ಷೆ ಜಾರಿಗೆ ಬರೋಬ್ಬರಿ 22 ವರ್ಷ  ತೆಗೆದುಕೊಂಡ ನಮ್ಮ  ಕಾನೂನುಗಳು ಇಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಚುರುಕಾಗಬೇಕು. ಇಲ್ಲವಾದರೆ ಅಮಾಯಕರ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಹೋದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.