ADVERTISEMENT

ಕಾಯುತ್ತಿದ್ದಾರೆ

ಶುಭಾ ಎ.ಆರ್., ಚಿಂತಾಮಣಿ
Published 26 ಮೇ 2016, 19:41 IST
Last Updated 26 ಮೇ 2016, 19:41 IST

ಪ್ರತಿವರ್ಷ ವರ್ಗಾವಣೆಗಾಗಿ ಕಾತರದಿಂದ ಕಾಯುವ ಶಿಕ್ಷಕರಿಗೆ ಈ ಬಾರಿಯೂ ಅದೇ ಗತಿಯಾಗಿದೆ. ಕಳೆದ ವರ್ಷವಂತೂ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ಮಧ್ಯವಾರ್ಷಿಕ ಪರೀಕ್ಷೆಗಳು ಮುಗಿದೇ ಹೋಗಿದ್ದವು.

ಇತ್ತ ಹುದ್ದೆಗಳು ಖಾಲಿ ಇರುವ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯದೆ ಅಲ್ಲಿನ ವಿದ್ಯಾರ್ಥಿಗಳಿಗೂ ತೊಂದರೆ, ಅತ್ತ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಪಡೆದ ಶಿಕ್ಷಕರಿಗೂ ತೊಂದರೆ. ಮೊದಲಿದ್ದ ಶಾಲೆಯಲ್ಲಿನ ಕಾರ್ಯಗಳನ್ನೂ ಮುಗಿಸಬೇಕು, ಹೊಸ ಶಾಲೆಯಲ್ಲಿ ಮಾಡದೆ ಉಳಿದ ಕಾರ್ಯಗಳನ್ನೂ ಮಾಡಬೇಕು.

ವರ್ಷದ ಮಧ್ಯೆ ವರ್ಗಾವಣೆ ಪಡೆದವರು ಪರವೂರಿನಲ್ಲಿ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸುವುದು ಎಷ್ಟು ಕಷ್ಟಕರ ಎನ್ನುವುದು ಅನುಭವಿಸಿದವರಿಗೇ ಗೊತ್ತು. ದೇಶದ ಭವಿಷ್ಯ ರೂಪಿಸುವ ಶಿಕ್ಷಕ ವರ್ಗಕ್ಕೆ ಸರ್ಕಾರ ಮಾನ್ಯತೆ ಕೊಟ್ಟು, ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.