ADVERTISEMENT

ಕ್ರೀಡಾಸ್ಫೂರ್ತಿ ಇರಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST

ಇತ್ತೀಚೆಗೆ ಬಾಂಗ್ಲಾದೇಶದ ಕ್ರಿಕೆಟ್‌ ತಂಡದ ವಿರುದ್ಧ ರೋಚಕವಾಗಿ ಗೆದ್ದು ಭಾರತೀಯ ತಂಡ ‘ನಿದಾಸ್‌ ಕಪ್‌’ ಜಯಿಸಿತು. ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು ನಡೆದುಕೊಂಡ ರೀತಿ ಆಕ್ಷೇಪಾರ್ಹವಾಗಿತ್ತು. ಇದರಿಂದಾಗಿ ಕೊನೆಯ ಪಂದ್ಯದಲ್ಲಿ ಲಂಕಾ ಅಭಿಮಾನಿಗಳು ಭಾರತ ತಂಡವನ್ನು ಬೆಂಬಲಿಸಿದರು. ಆಟಗಾರರ ವರ್ತನೆಯು ಕೆಲವೊಮ್ಮೆ ಆಯಾ ದೇಶದ ಅಭಿಮಾನಿಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

ತಮ್ಮ ತಂಡ ಅಥವಾ ಆಟಗಾರರು ಸೋತಾಗ, ಅಭಿಮಾನಿಗಳಲ್ಲಿ ನಿರಾಶೆ, ಹತಾಶೆಗಳು ಸಹಜವಾಗಿಯೇ ಕಂಡುಬರುತ್ತವೆ. ಆದರೆ ಅದು ಅತಿಯಾಗಿ ದುರ್ವರ್ತನೆಗೆ ಕಾರಣವಾಗಬಾರದು. ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಆಟವನ್ನು ಯುದ್ಧದಂತೆ ವೈಭವೀಕರಿಸುವುದನ್ನು ನಿಲ್ಲಿಸಬೇಕಾಗಿದೆ. ಗೆದ್ದಾಗ ಅಥವಾ ಸೋತಾಗ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಮೆರೆದರೆ, ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಮತ್ತು ಆಟದ ಘನತೆ, ಗೌರವವನ್ನು ಹೆಚ್ಚಿಸಿದಂತಾಗುತ್ತದೆ.

-ಸುದರ್ಶನ ಎಚ್. ಯಡಹಳ್ಳಿ, ಬೆನಕಟ್ಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.