ADVERTISEMENT

ಖಂಡನಾರ್ಹ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಮೇ 2017, 19:30 IST
Last Updated 19 ಮೇ 2017, 19:30 IST

ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೈಗೊಂಡ ತೀರ್ಮಾನ ಖಂಡನಾರ್ಹ.

ಈ ಬಾರಿ ಎಸ್ಎಸ್ಎಲ್‌ಸಿ ಫಲಿತಾಂಶ ಹಿಂದಿನ ವರ್ಷಕ್ಕಿಂತ ಕಳಪೆಯಾಗಿದ್ದರಿಂದ ಒಟ್ಟಾರೆ ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ ಆರಂಭವಾಗಿದೆ. ಇಂಥ ಸ್ಥಿತಿಯಲ್ಲೂ ಶಿಕ್ಷಕರ ನೇಮಕಾತಿಯಲ್ಲಿ ವಿಳಂಬವಾಗುತ್ತದೆ ಎಂಬ ನೆಪ ಹೇಳಿ ಪಾರದರ್ಶಕವಾಗಿರುವ ಸಿಇಟಿ ಪರೀಕ್ಷೆಗೆ ತಿಲಾಂಜಲಿ ನೀಡಲು ಸರ್ಕಾರ ಮುಂದಾಗಿದ್ದು ವಿಪರ್ಯಾಸ.

ಬಿ.ಇಡಿ ಮುಗಿಸಿ, ಟಿಇಟಿ ಪರೀಕ್ಷೆ ಪಾಸಾದರೆ ಸಾಕು ಎಂಬ ಹೊಸ ನಿಯಮ ಅನ್ವಯವಾದರೆ ಶೈಕ್ಷಣಿಕ ಗುಣಮಟ್ಟಕ್ಕೆ ಧಕ್ಕೆಯಾಗುವುದರಲ್ಲಿ ಸಂಶಯವಿಲ್ಲ. ಹೆಚ್ಚು ವಿಳಂಬವಾಗದಂತೆ ಸಿಇಟಿ ಮೂಲಕವೇ ನೇಮಕಾತಿ ಮಾಡಲು ಯಾಕೆ ಸಾಧ್ಯವಿಲ್ಲ?

ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯೇ? ಇದಕ್ಕೆ ಸರ್ಕಾರವೇ ಉತ್ತರಿಸಬೇಕು. ಇಷ್ಟಕ್ಕೂ ಶಿಕ್ಷಕರ ನೇಮಕಾತಿಯಲ್ಲಿ ಕಾಲವಿಳಂಬ ಮಾಡಿದ್ದು ಸರ್ಕಾರವೇ ಅಲ್ಲವೇ?
-ಶರಣು ಪಾಟೀಲ್ ಹೇರೂರು, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT