ADVERTISEMENT

ಖಾಸಗಿ ಪಾಸ್‌ ಕೌಂಟರ್‌ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2016, 19:37 IST
Last Updated 1 ಫೆಬ್ರುವರಿ 2016, 19:37 IST
ಖಾಸಗಿ ಪಾಸ್‌ ಕೌಂಟರ್‌ ನಾಪತ್ತೆ
ಖಾಸಗಿ ಪಾಸ್‌ ಕೌಂಟರ್‌ ನಾಪತ್ತೆ   

ನಂದಿನಿ ಲೇಔಟ್‌ನ ಕಂಠೀರವ ಸ್ಟುಡಿಯೊ ಬಳಿಯ ನಂ. 11/ಎ 7ನೇ ಮುಖ್ಯ ರಸ್ತೆಯ ನರಸಿಂಹಲು ಬಡಾವಣೆಯ ಶ್ರೀ ಉಮಾಮಹೇಶ್ವರಿ ಎಂಟರ್‌ ಪ್ರೈಸಸ್ ಕೆಎಸ್‌ಆರ್‌ಟಿಸಿ   ಟ್ರಾವೆಲ್‌ ಹೌಸ್‌ ಅನ್ನು ಮುಚ್ಚಿರುವುದರಿಂದ  ಇಲ್ಲಿನ ಸಾರ್ವಜನಿಕರು ಪಾಸ್‌ಗಾಗಿ ಯಶವಂತಪುರ ಇಲ್ಲವೇ ಮೆಜೆಸ್ಟಿಕ್‌  ನಿಲ್ದಾಣಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಮುಂಚೆ ಇಲ್ಲಿನ ಉಮಾಮಹೇಶ್ವರಿ ಖಾಸಗಿ ಪಾಸ್‌ ಕೌಂಟರ್‌ನಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಮಾಸಿಕ ಪಾಸ್‌ಗಳು ಹಾಗೂ ಕೆಎಸ್ಆರ್‌ಟಿಸಿ ಬುಕ್ಕಿಂಗ್‌ ಮಾಡಿಕೊಡಲಾಗುತ್ತಿತ್ತು. ಆದರೆ ಹೊಸವರ್ಷದ ಪ್ರಾರಂಭದಿಂದ ಟ್ರಾವಲ್‌ ಹೌಸ್‌ನ ಬಾಗಿಲಿನಲ್ಲಿ ‘2016 ಜನವರಿ ಬಿಎಂಟಿಸಿ ತಿಂಗಳ ಪಾಸ್‌ಗಳು ದೊರೆಯುವುದಿಲ್ಲ’ ಎಂದು ಫಲಕ ಹಾಕಿ  ಬಾಗಿಲು ಮುಚ್ಚಿ ತಿಂಗಳೇ ಕಳೆದಿದೆ.

ಪ್ರತಿ ತಿಂಗಳು ನೂರಾರು ಪಾಸ್‌ಗಳು ಖರ್ಚಾಗುತ್ತಿದ್ದ ಖಾಸಗಿ ಕೌಂಟರ್‌ ಅನ್ನು ಮುಚ್ಚಿದ್ದಾರೋ ಇಲ್ಲವೇ ಬೇರೆಡೆ ಬದಲಾಯಿಸಿದ್ದಾರೋ ಎಂದು ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ವೆಬ್‌ಸೈಟ್‌ನಲ್ಲಿ ಇರುವ ಮಾಲೀಕರ ಮೊಬೈಲ್‌ ನಂ. ಕೂಡಾ ತಪ್ಪಾಗಿದೆ ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿ ವಿನಂತಿ.
- ನವೀನ್‌ ಕುಮಾರ್‌ ಎ.ಎಂ,
ನರಸಿಂಹಲು ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.