ADVERTISEMENT

ಗೌರವ ಸೂಚಕ

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST

‘ಭಗವಂತ – ಭಗವಾನ್’ ಶಬ್ದಗಳಿಗೆ ಸಂಪತ್ತು ಉಳ್ಳ, ಶ್ರೀಯುತ, ಶ್ರೀಮಂತ, ಶ್ರೀಮಂತಿಕೆಯುಳ್ಳ ಎಂಬುದು ಸಾಮಾನ್ಯ ಅರ್ಥ. ಇದು ಹಿರಿಯರನ್ನು ಹೆಚ್ಚು ಗೌರವಪೂರ್ವಕವಾಗಿ ಸಂಬೋಧಿಸಲು ಬಳಸುವ ಪದ.

‘ಶ್ರೀ’ ಅನ್ನು ಲಕ್ಷ್ಮಿಗೂ, ‘ಶ್ರೀಯುತ’ ಅನ್ನು ಶ್ರೀಪತಿಗೂ ಸೀಮಿತವಾಗಿಸುವಂತೆ ಭಗವಾನ್, ಭಗವಂತಗಳನ್ನು ದೇವರಿಗೆ, ಲಕ್ಷ್ಮೀಪತಿಗೆ ಮಾತ್ರವಲ್ಲ, ಇತರ ಹಿರಿಯರಿಗೂ ಉಪಯೋಗಿಸುವ ಕ್ರಮ ಬಳಕೆಗೆ ಬಂದಿದೆ.

ಬುದ್ಧನನ್ನು ‘ಭಗವಾನ್’ ಎಂದಿರುವುದು ಮೊದಲನೆಯ ಅರ್ಥವಾದ, ‘ಮನುಷ್ಯರಲ್ಲಿ ಹೆಚ್ಚು ಗೌರವಾರ್ಹ’ ಎಂಬ ಅರ್ಥದಲ್ಲಿ ಮಾತ್ರ.
ಪಂಡಿತಾರಾಧ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT