ADVERTISEMENT

ಗ್ರಾಹಕರ ಶೋಷಣೆ

ಕೆ.ವಿ.ಸರಸ್ವತಿ, ಬೆಂಗಳೂರು
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ನಾನು ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿರುವ ಏಜೆನ್ಸಿಯೊಂದರ ಮೂಲಕ  ಅಡುಗೆ ಅನಿಲ ಸಂಪರ್ಕ ಪಡೆದಿದ್ದೇನೆ. ಪ್ರತಿಸಲವೂ ಸಿಲಿಂಡರ್ ಪಡೆಯುವಾಗ ಬಟವಾಡೆ ಹುಡುಗರು ₹ 25 ಹೆಚ್ಚುವರಿ ಪಾವತಿಗೆ ಬೇಡಿಕೆ ಇಡುತ್ತಾರೆ. ಕೊಡಲು ನಿರಾಕರಿಸಿದರೆ ಧಮಕಿ ಹಾಕುತ್ತಾರೆ. ತಮಗೆ ಏಜೆನ್ಸಿ ಕೊಡುತ್ತಿರುವ ಸಂಬಳ  ಯಾವುದಕ್ಕೂ ಸಾಕಾಗದು, ಹೀಗಾಗಿ ಇದನ್ನು ಪಡೆಯುವುದು ಅನಿವಾರ್ಯ ಎಂದು ಸಮಜಾಯಿಷಿ ನೀಡುತ್ತಾರೆ.

ಒಬ್ಬ ಹುಡುಗ ದಿನಕ್ಕೆ 100 ಸಿಲಿಂಡರ್‌ಗಳಂತೆ ಬಟವಾಡೆ ಮಾಡಿದರೆ ತಿಂಗಳಿಗೆ 3,000 ಸಿಲಿಂಡರ್‌ಗಳಾಗುತ್ತವೆ. ಲೆಕ್ಕಕ್ಕೆ ಸಿಗದ ವರಮಾನ ಕನಿಷ್ಠ ಎಂದರೂ ₹ 75 ಸಾವಿರ. ಈ ಅವ್ಯವಹಾರದಲ್ಲಿ ಗ್ಯಾಸ್ ಏಜೆನ್ಸಿಗಳೂ ಭಾಗಿಯಾಗಿರುತ್ತವೆ. ಹೀಗೆ ಬಟವಾಡೆ ಹುಡುಗರ ಮೂಲಕ ಲಕ್ಷಾಂತರ ರೂಪಾಯಿ ಅನಧಿಕೃತ ವರಮಾನ ಏಜೆನ್ಸಿಗಳನ್ನು ಸೇರುತ್ತದೆ.

ಎಲ್ಲ ಗ್ಯಾಸ್ ಏಜೆನ್ಸಿಗಳಲ್ಲೂ ಎಗ್ಗಿಲ್ಲದೆ  ನಡೆಯುತ್ತಿರುವ ಈ ಅವ್ಯವಹಾರವನ್ನು ತಡೆಯಲು ಸಾಧ್ಯವಿಲ್ಲವೆ? ಬಿಲ್ಲಿನಲ್ಲೇ ಬಟವಾಡೆ ಶುಲ್ಕವಾಗಿ 10 ಅಥವಾ 15 ರೂಪಾಯಿ ನಮೂದಿಸಿ, ಆ ಹಣವನ್ನು ಬಟವಾಡೆ ಸಿಬ್ಬಂದಿಗೆ ವೇತನವಾಗಿ ನೀಡಿದರೆ ಅವರೂ  ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಅವ್ಯವಹಾರಕ್ಕೂ ತಡೆ ಬೀಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.