ADVERTISEMENT

ಜಾಗತಿಕ ಕರೆಗೆ ಓಗೊಡಿ

ಪ್ರೊ.ಶಿವರಾಮಯ್/ಬೆಂಗಳೂರು
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ದಿನ ಕಳೆದ ಹಾಗೆಲ್ಲಾ ತಾಲಿಬಾನ್‌ ಉಗ್ರರು, ಇಸ್ಲಾ­ಮಿಕ್‌ ಸ್ಟೇಟ್‌ ಉಗ್ರರು, ಅಲ್‌ಕೈದಾ ಮುಂತಾದ ನರ­ರಾಕ್ಷಸರ ಉಪಟಳ ಮುಗಿಲು ಮುಟ್ಟು­ತ್ತಿದೆ; ಭುವಿಗೆ ರಕ್ತದೋಕುಳಿ ಬರೆಯುತ್ತಿದೆ. ಇದೇ ಡಿಸೆಂಬರ್‌ 16ರಂದು ಪೆಶಾವರದಲ್ಲಿ ಸೈನಿಕ ಶಾಲೆಯ 132 ಮಕ್ಕಳ ಹತ್ಯಾ­ಕಾಂಡ ಕಂಡು ಎದೆ ಬಿರಿಯುತ್ತದೆ, ಕಣ್ಣೀರು ಬತ್ತು­ತ್ತಿದೆ! ನಾಗರಿಕ ಜಗತ್ತಿನ ಮಾನವ ಸ್ವಾತಂತ್ರ್ಯಕ್ಕೆ ಉಗ್ರರು ಸವಾಲು.

ಯಾವುದೇ ಜಾತಿ, ಜನಾಂಗ, ಧರ್ಮ, ದೇಶ, ಭಾಷೆ, ಬಣ್ಣಗಳ ಮುಲಾಜಿಲ್ಲದೆ ಈ ಅವಿವೇಕಿಗಳ ಹುಟ್ಟ­ಡಗಿಸಲು ಜಾಗತಿಕವಾಗಿ, ಪ್ರತಿಯೊಂದು ದೇಶವೂ ಮತ್ತು ಆಯಾ ದೇಶವಾಸಿ ಪ್ರಜೆಗಳೂ ಪ್ರತಿಜ್ಞೆ ಮಾಡಬೇಕು. ಈಗ ಸರ್ಕಾರಗಳು ನಡೆಸುವ ಕಾರ್ಯಾಚರಣೆಗೆ ಪ್ರಜೆಗಳು ಸಹಕರಿಸಬೇಕು. ಇಲ್ಲ­ವಾದರೆ ಮಾನವತೆಯ ಸರ್ವನಾಶ. ಆದ್ದರಿಂದ,
ಏಳಿ, ಎಚ್ಚರಗೊಳ್ಳಿ!
ವಿರಮಿಸದಿರಿ ಗುರಿಮುಟ್ಟುವತನಕ!
ಈ ಜಾಗತಿಕ ಕರೆಗೆ ಓಗೊಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.