ADVERTISEMENT

ಜಾರಿ ಸಾಧ್ಯವಾಗದ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:30 IST
Last Updated 3 ಮಾರ್ಚ್ 2015, 19:30 IST

‘ಹುಲಿ ಹಾಗೂ ಸಿಂಹಗಳನ್ನು  ಮನೆಯಲ್ಲಿ ಸಾಕಲು ಅವಕಾಶ ನೀಡುವ ಕಾನೂನು ರೂಪಿಸುವ ಅಗತ್ಯವಿದೆ’ (ಪ್ರ.ವಾ., ಮಾರ್ಚ್‌ 2) ಎಂದು ಮಧ್ಯಪ್ರದೇಶದ ಪಶುಸಂಗೋಪನೆ ಸಚಿವೆ ಕುಸುಮಾ ಮೆಹದೆಲೆ ನೀಡಿರುವ ಸಲಹೆ ಜಾರಿ ಯೋಗ್ಯವಲ್ಲ.

ಕಾಡು ಪ್ರಾಣಿಗಳು ಅದರಲ್ಲೂ ಮಾಂಸಾಹಾರಿ ಪ್ರಾಣಿಗಳು ಎಂದಿಗೂ ಕೌಟುಂಬಿಕ ಸಾಕು ಪ್ರಾಣಿಗಳಾಗಲು ಸಾಧ್ಯವಿಲ್ಲ. ಮನೆ­ಯಲ್ಲಿ ಬೆಳೆದ ಪ್ರಾಣಿಗಳು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ತಂತ್ರ­ಗಳನ್ನು ಕಲಿಯಲಾಗುವುದಿಲ್ಲ. ಹುಲಿಯನ್ನು ಮನೆಯಲ್ಲಿ ಸಾಕಿದರೆ ಅದು ಹುಲಿ­ಯಂತೆ ಬೆಳೆಯುವುದಿಲ್ಲ. ಹುಲಿಯಂತಿದ್ದರೂ ಗುಣ ನಾಯಿಯಂತಾಗಿ­ಬಿಡುತ್ತದೆ.
–ಸುನೀಲ್ ಬಿ.ಎನ್., ಬಿಂಡಹಳ್ಳಿ, ಪಾಂಡವಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.