ADVERTISEMENT

ಜೀವಪರ ಕಾಳಜಿಯೂ ಪ್ರಚಾರದ ಸರಕು!

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 15 ನವೆಂಬರ್ 2017, 3:59 IST
Last Updated 15 ನವೆಂಬರ್ 2017, 3:59 IST

ಕಂಬಳದ ಕೋಣಗಳು, ಜಲ್ಲಿಕಟ್ಟು ಸ್ಪರ್ಧೆ, ಬೀದಿ ಬದಿ ನಾಯಿಗಳು... ಹೀಗೆ ಪ್ರಾಣಿಹಿಂಸೆಯ ಬಗ್ಗೆ ಅಪಾರ ಕಳಕಳಿ ತೋರುವ ‘ಪೆಟಾ’ ಸ್ವಯಂಸೇವಾ ಸಂಸ್ಥೆಯ ಜೀವಪರ ಕರುಣೆ ಶ್ಲಾಘನೀಯ. ಆದರೆ ಬೀದಿ ಬದಿ ಬದುಕುವ ಕಂದಮ್ಮಗಳಿಗೆ ನಾಯಿಗಳು ಕಚ್ಚಿದಾಗ, ಕರುಳು ಕಿತ್ತು, ನೆತ್ತರು ಹೀರಿದಾಗ ಇವರ ಮನಸ್ಸು ಏಕೆ ಚುರ್ರೆನ್ನುವುದಿಲ್ಲ? ಆರೋಗ್ಯವಂತ ದನಕರು, ಆಡು, ಕುರಿ, ಕೋಳಿಗಳನ್ನು ಕೊಚ್ಚಿ ಕೊಲ್ಲುವಾಗ ಕರುಳು ಏಕೆ ಕರಗುವುದಿಲ್ಲ?

ಸಂದಿಯಿಂದ ನುಗ್ಗಿ ಬಂದ ಹಂದಿಗಳಿಂದ ರಸ್ತೆಗಳಲ್ಲಿ ಬಿದ್ದು ನರಳಿದ ವಾಹನ ಸವಾರರಿದ್ದಾರೆ. ಅವರನ್ನೂ ಕಂಡು ಸಂಕಟಪಡಬೇಕಲ್ಲವೇ? ನಮ್ಮ ದೇಶದಲ್ಲಿ ಇಂಥವೆಲ್ಲ ಹವ್ಯಾಸಗಳಾಗಿ, ನೈಜ ಕಾಳಜಿ ಕಾಣೆಯಾಗುತ್ತಿದೆ. ಜೀವಪರ ಕಾಳಜಿಯೂ ಪ್ರಾಣಿದಯೆಯೂ ಪ್ರಚಾರದ ಸರಕಾಗಿ ಮಾರ್ಪಡುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT