ADVERTISEMENT

ಝೀಬ್ರಾ ಕ್ರಾಸ್‌ ಇದೆ ದಾರಿ ಮಾತ್ರ ಮುಚ್ಚಿದೆ

ಕುಂದು ಕೊರತೆ

ಈಶ್ವರ್‌
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಎದುರಲ್ಲಿ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತವೊಂದನ್ನು ನೆಪವಾಗಿಸಿ, ರಸ್ತೆ ದಾಟುವುದನ್ನು ಅಲ್ಲಿ ನಿಷೇಧಿಸಲಾಗಿದೆ. ಡಿವೈಡರ್‌ ಭಾಗದ ಬ್ಯಾರಿಕೇಡ್‌ ಅನ್ನು ರಸ್ತೆ ದಾಟದಂತೆ ಅಡ್ಡ ಹಾಕಲಾಗಿದೆ.

ಮೆಟ್ರೊ ರೈಲಿನಿಂದ ಇಳಿಯುವ ಪ್ರಯಾಣಿಕರೇನೋ ಸ್ಕೈವಾಕ್‌ ಮೂಲಕ ಕೆಳಗೆ ಇಳಿದು ಬರಬಹುದು. ಆದರೆ, ಎದುರಲ್ಲಿಯೇ ಇರುವ ಬಸ್‌ ನಿಲ್ದಾಣದಲ್ಲಿ ಇಳಿಯುವವರಿಗೆ ಈ ಅವಕಾಶವಿಲ್ಲ. ಎಂ.ಜಿ. ರಸ್ತೆಯ ಒಂದು ಬದಿಯಲ್ಲಿ ಎಷ್ಟೋ ಕಚೇರಿಗಳಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ನಿತ್ಯವೂ ಬಸ್‌ಗಳಲ್ಲಿ ಬಂದಿಳಿಯುತ್ತಾರೆ. ಅವರೀಗ ತಮ್ಮ ಕಚೇರಿ ತಲುಪಲು ಹಾಗೂ ಅಲ್ಲಿಂದ ಬಸ್‌ ನಿಲ್ದಾಣಕ್ಕೆ ಬರಲು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಥ ಸಾಹಸ ಮಾಡಬೇಕಿದೆ. ವಾಹನ ಸ್ನೇಹಿಯಾಗುತ್ತಿರುವ ನಗರದ ವ್ಯವಸ್ಥೆಗೆ ಇದು ಇನ್ನೊಂದು ಉದಾಹರಣೆ. ಮೊದಲಿನಂತೆ ಅಲ್ಲಿ ರಸ್ತೆ ದಾಟುವ ಅವಕಾಶವನ್ನು ಕಲ್ಪಿಸಿಕೊಟ್ಟರೆ ಅನೇಕರಿಗೆ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.