ADVERTISEMENT

ಟಿ.ಆರ್‌.ಪಿ. ಮತ್ತು ಸಮಾಜದ ಸ್ವಾಸ್ಥ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಮಾಧ್ಯಮ ಪ್ರತಿನಿಧಿಗಳಿಗೆ  ಮುಖ್ಯಮಂತ್ರಿಗಳು ‘ನಿಮಗೆ ರೇಪ್ ಬಿಟ್ಟರೆ ಬೇರೆ ಸುದ್ದಿ ಇಲ್ಲವೇ?’ ಎಂದು ಕೇಳಿರುವುದು ಸೂಕ್ತವಾಗಿದೆ. ಇಡೀ ಕುಟುಂಬ ಕುಳಿತು ವೀಕ್ಷಿಸುವ ದೃಶ್ಯ ಮಾಧ್ಯಮಗಳಲ್ಲಿ ಅತ್ಯಾಚಾರವನ್ನು ವರ್ಣರಂಜಿತಗೊಳಿಸಿ ಬಿತ್ತರಿಸಲಾಗುತ್ತಿದೆ.

ಹಸುಳೆಯ ಮೇಲೆ ಅತ್ಯಾಚಾರ, ಮಗಳ ಮೇಲೆ ಅತ್ಯಾಚಾರ ಎನ್ನುವ ಸುದ್ದಿಗಳು ಧಾರಾವಾಹಿಯಂತೆ ಬಿತ್ತರಗೊಳ್ಳುತ್ತಿದ್ದರೆ, ಹೆಣ್ಣು ಮಕ್ಕಳಿರುವ ಕುಟುಂಬಗಳು ಒಟ್ಟಾಗಿ ಕುಳಿತು ಟಿ.ವಿ. ವೀಕ್ಷಿಸಲು ಹೇಸಿಗೆಯಾಗುತ್ತದೆ. ಅಪರಿಚಿತರ ಚಿಕ್ಕಮಗುವನ್ನು ಮುದ್ದಿನಿಂದ ಮಾತನಾಡಿಸಲೂ ಅಂಜಿಕೆಯಾಗುತ್ತಿದ್ದು, ಹೇಯಕೃತ್ಯ ಎಸಗುತ್ತಿರುವ ಗಂಡು ಸಮಾಜಕ್ಕೆ ನಾನು ಸೇರಿದವನು ಎಂದು ತಲೆ ತಗ್ಗಿಸುವಂತಾಗಿದೆ.

ವಿಕೃತ ಕಾಮಿಗಳಿಗೆ ಕಠೋರ ಶಿಕ್ಷೆ ವಿಧಿಸಿ ಮತ್ತೆ ಅವರಿಂದ ಇಂಥ ಕೃತ್ಯ ಮರುಕಳಿಸದಂತೆ ತಡೆಯಬಹುದೇ ಹೊರತು ಅತ್ಯಾಚಾರಗಳನ್ನು ಸಂಪೂರ್ಣವಾಗಿ ಒಮ್ಮೆಗೇ ತಡೆಯಲು  ಸಾಧ್ಯವಿಲ್ಲ. ಕೇಳುವ ಪ್ರಶ್ನೆಗಳು ಸಮಾಜದ ಸ್ವಾಸ್ಥ್ಯ ಹೆಚ್ಚಿಸು ವಂತಿರಬೇಕೇ ಹೊರತು ಮಾಧ್ಯಮಗಳ ಟಿ.ಆರ್‌.ಪಿ. ಹೆಚ್ಚಳವೇ ಮುಖ್ಯವಾಗಿರಬಾರದು. ಮುಖ್ಯಮಂತ್ರಿಗಳು ಕೇಳಿರುವ ಪ್ರಶ್ನೆ ಟೀಕಾರ್ಹವಲ್ಲ.
–ಪ್ರಕಾಶ್ ಕಾಕಾಲ್, ಹೆಗ್ಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.