ADVERTISEMENT

ಡಬ್ಬಿಂಗ್‌ನಿಂದ ಏಳಿಗೆ

ಅಖಿಲೇಶ್ ಕುಮಾರ್ ಎಚ್.ಆರ್., ಸಾಗರ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಕನ್ನಡ ಚಿತ್ರರಂಗ ಮುಳುಗಿಹೋಗುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಹಾಗಾದರೆ ಡಬ್ಬಿಂಗ್‌ಗೆ ಅವಕಾಶ ಕೊಟ್ಟಿರುವ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳು ಮುಳುಗಿಹೋಗಿವೆಯೇ?

ಚಿತ್ರರಂಗಗಳ ನಡುವೆ ಕೊಡು- ಕೊಳ್ಳುವಿಕೆ ಇರಬೇಕು. ಸಿನಿಕ್ಷಣಗಳನ್ನು ಎಲ್ಲರೂ ತಮ್ಮ ಭಾಷೆಯಲ್ಲೇ ಕಣ್ತುಂಬಿ ಕೊಳ್ಳುವಂತೆ ಆಗಬೇಕು. ಹೀಗೆ ಕನ್ನಡ ಸಿನಿಮೋದ್ಯಮ ಬೆಳೆಯಬೇಕು. ಇದರಿಂದ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟ ದಲ್ಲಿ ಪ್ರಸಿದ್ಧಿ ಪಡೆಯುತ್ತದೆ ಮತ್ತು ಕನ್ನಡ ಚಿತ್ರನಟರ ಪ್ರಸಿದ್ಧಿಯೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.