ADVERTISEMENT

ಡಬ್ಬಿಂಗ್‌... ತರ್ಕರಹಿತ

ಜಿ.ವಿ.ಗಣೇಶಯ್ಯ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಇತರ ಭಾಷೆಗಳ ಜನಪ್ರಿಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್‌ ಮಾಡಲು ಅವಕಾಶ ನೀಡದಿರುವುದರಿಂದ, ಕನ್ನಡ ಸಿನಿಮಾ ಉದ್ಯಮಕ್ಕೆ ಯಾವ ರೀತಿಯಲ್ಲಿ ಎಷ್ಟು ಲಾಭವಾಗಿದೆ ಎನ್ನುವುದನ್ನು ಡಬ್ಬಿಂಗ್‌ ವಿರೋಧಿಗಳು ತಿಳಿಸಬೇಕು. ಇಂತಹ ಕ್ರಮಗಳಿಂದ ಕನ್ನಡಿಗರೆಲ್ಲ ಪರಭಾಷೆ ಸಿನಿಮಾಗಳ ಬದಲಿಗೆ ಕನ್ನಡ ಸಿನಿಮಾಗಳನ್ನಷ್ಟೇ ನೋಡುತ್ತಾರೆ ಎಂದುಕೊಳ್ಳುವುದು ಬರೀ ಭ್ರಮೆಯಷ್ಟೆ.

‘ಅನಕೃ, ರಾಮಮೂರ್ತಿ, ರಾಜ್‌ಕುಮಾರ್‌ ಎಲ್ಲರೂ ಡಬ್ಬಿಂಗ್‌ ವಿರೋಧಿಸಿದ್ದರು, ಆದ್ದರಿಂದ ನಾವೂ ವಿರೋಧಿಸುತ್ತೇವೆ’ ಎನ್ನುವ ತರ್ಕವೇ ಸರಿಯಿಲ್ಲ. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಈಗ ನಾವು ಡಬ್ಬಿಂಗ್‌ ಮಾಡಲಿ ಬಿಡಲಿ, ಕನ್ನಡಿಗರು ಅನ್ಯ ಭಾಷೆಯ ಸಿನಿಮಾಗಳನ್ನು ಮೂಲದಲ್ಲೇ ನೋಡುತ್ತಾ ಖುಷಿಪಡುತ್ತಾರೆ. ಅಂದರೆ ಡಬ್‌ ಮಾಡಿದರೂ ಮಾಡದಿದ್ದರೂ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ ಎಂದಾಯಿತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.