ADVERTISEMENT

ತಂತ್ರಜ್ಞಾನದ ಸದ್ಬಳಕೆ

ಪಂಪಾಪತಿ ಹಿರೇಮಠ ಧಾರವಾಡ
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST

ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಕುಡಿಯುವ ನೀರಿಗಾಗಿ ಕಿಲೊಮೀಟರ್‌ಗಳಷ್ಟು ದೂರ ನಡೆದುಕೊಂಡು ಹೋಗುವ ಪರಿಸ್ಥಿತಿ ಈಗಲೂ ಇದೆ. ನಗರ ಪ್ರದೇಶಗಳಲ್ಲಿಯೂ ನೀರಿಗಾಗಿ ಬವಣೆಪಡುವುದು ತಪ್ಪಿಲ್ಲ,  ಸರತಿ ಸಾಲಿನಲ್ಲಿ ನಿಲ್ಲುವ ಕಷ್ಟ ನಿವಾರಣೆ ಆಗಿಲ್ಲ.

ಆದರೆ ಚೆನ್ನೈ ನಗರದಿಂದ 30 ಕಿ.ಮೀ. ದೂರದಲ್ಲಿರುವ  ಒರಕ್ಕಾಡು  ಗ್ರಾಮ ವಾಸಿಗರು ಸ್ಮಾರ್ಟ್‌ ಕಾರ್ಡ್‌ ಬಳಸಿ ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದಾರೆ. ನೀರಿನ ಪ್ರಮಾಣಕ್ಕೆ ತಕ್ಕಂತೆ ಯಂತ್ರ ಹಣ ಮುರಿದುಕೊಳ್ಳುತ್ತದೆ. 20 ಲೀಟರ್‌ ನೀರಿಗೆ ಎರಡು ರೂಪಾಯಿ ದರ ನಿಗದಿಪಡಿಸಲಾಗಿದೆ.

ತಂತ್ರಜ್ಞಾನದಲ್ಲಿ ನಿರಂತರ ನಡೆಯುತ್ತಿರುವ ಆವಿಷ್ಕಾರಗಳನ್ನು  ಈ ರೀತಿ ಜನೋಪಯೋಗಿ ಕೆಲಸಕ್ಕೆ ಬಳಸಿರುವುದು ಶ್ಲಾಘನೀಯ. ನೀರಿನ ಮಿತವ್ಯಯಕ್ಕೆ ಸಂಬಂಧಿಸಿದಂತೆ ಇದೊಂದು ಕ್ರಾಂತಿಕಾರಿ ಹೆಜ್ಜೆ. ನೀರು ಸಕಲ ಜೀವಿಗಳಿಗೂ ಅತ್ಯವಶ್ಯಕ. ಅದನ್ನು ಪೋಲು ಮಾಡುವುದು ಅಕ್ಷಮ್ಯ. ನೀರಿನ ಮಿತಬಳಕೆಗೆ ಇದರಿಂದ ಸಹಾಯಕ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ನಮ್ಮ ಜನಪ್ರತಿನಿಧಿಗಳೂ ಯೋಚಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.