ADVERTISEMENT

ತಾರತಮ್ಯ ಏಕೆ?

ಪ್ರಕಾಶ್‌ ಕಾಕಲ್‌, ಹೆಗ್ಗೋಡು
Published 2 ಸೆಪ್ಟೆಂಬರ್ 2015, 19:46 IST
Last Updated 2 ಸೆಪ್ಟೆಂಬರ್ 2015, 19:46 IST

ಈಗಾಗಲೇ ಅತ್ಯಾಚಾರ ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನಿನಲ್ಲಿರುವ ಪ್ರಬಲ ಮೇಲ್ಜಾತಿಯ ಸ್ವಾಮೀಜಿಯೊಬ್ಬರ  ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಚಾರ್ಜ್‌ಶೀಟ್‌  ಹಾಕುವ ಹಂತದಲ್ಲಿದೆ ಎಂದು ವರದಿಯಾಗಿದೆ. ಪ್ರಬಲ ಸಾಕ್ಷ್ಯಾಧಾರಗಳು ದೊರೆತಿವೆ ಎನ್ನುವ ಹೇಳಿಕೆ ನೀಡಿದ್ದ ವಕೀಲರ ಹೇಳಿಕೆಗೆ ಪುಷ್ಟಿ ನೀಡುವಂತೆ ನ್ಯಾಯಾಲಯದಲ್ಲಿ  ಸ್ವಾಮೀಜಿಗೆ ಹಿನ್ನಡೆಯಾಗಿದೆ.

ಈಗ ಅವರ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರದಡಿ ದಾಖಲಾದ ಹಲವಾರು ಪ್ರಕರಣಗಳಲ್ಲಿ ಕೂಡಲೇ ಬಂಧಿಸುವ ಕಾನೂನು ಈ ಸ್ವಾಮೀಜಿಗೆ ಮಾತ್ರ ವಿನಾಯಿತಿ ನೀಡಿ, ನುಣುಚಿಕೊಳ್ಳುವ ಕಾನೂನು ರಂಧ್ರಗಳನ್ನು ಹಿಗ್ಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆಯೇನೋ ಎನ್ನುವ ಅನುಮಾನ ಕಾಡುತ್ತಿದೆ.

ಬಹುಶಃ ಮೇಲ್ಜಾತಿಯ ಸ್ವಾಮೀಜಿ ಎನ್ನುವ ಕಾರಣವೂ ಇರಬಹುದೇನೊ. ಏಕೆಂದರೆ ಇತ್ತೀಚೆಗೆ ಪ್ರಬಲ ಸಮುದಾಯವಲ್ಲದ ಬಂಜಾರ ಸ್ವಾಮೀಜಿಯನ್ನು  ಅತ್ಯಾಚಾರ ಪ್ರಕರಣದಲ್ಲಿ ಕೂಡಲೇ ಬಂಧಿಸಿದ ಕಾನೂನು, ಈ ಸ್ವಾಮಿಗೆ ಅನ್ವಯವಾಗದಿರುವುದು ಕಾನೂನು ವ್ಯವಸ್ಥೆಯೂ ಶ್ರೇಣೀಕೃತಗೊಂಡಿದೆಯೋ ಎಂಬ ಭಾವನೆ ಬರುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.