ADVERTISEMENT

ದ್ವಂದ್ವ ನೀತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST

ರಾಷ್ಟ್ರ ಮಟ್ಟದ ಕೆಲವು ಪತ್ರಿಕೆ ಮತ್ತು ಚಾನೆಲ್‌ಗಳ ದ್ವಂದ್ವ ನೀತಿ ನೋಡಿ ಆಶ್ಚರ್ಯವಾಯಿತು. ಮೊನ್ನೆ, ಮಂಗಳವಾರ ಮೋದಿ ಅವರ ಭಾಷಣದ ತಿರುಳನ್ನು ಬಹುಪಾಲು ಪತ್ರಿಕೆಗಳು ಮುಖಪುಟದಲ್ಲಿಯೇ ಪ್ರಕಟಿಸಿವೆ.

ಆದರೆ ಅದಕ್ಕಿಂತ  ಒಂದು ದಿನ ಮುಂಚೆ (ಸೋಮವಾರ) ನಮ್ಮ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ ಪಕ್ಷದ ವತಿಯಿಂದ ಲೋಕಸಭೆಯಲ್ಲಿ ಅದ್ಭುತ ಭಾಷಣ ಮಾಡಿ ಸರ್ಕಾರದ ಸುಳ್ಳು-ಮೋಸಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಅದರ ಬಗ್ಗೆ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳಲ್ಲಿ ಚಕಾರವೇ ಇಲ್ಲ. ಕೊನೇಪಕ್ಷ ಅವರ ಭಾಷಣದ ಸಾರವನ್ನಾದರೂ ಪ್ರಕಟಿಸುವ, ಪ್ರಸಾರ ಮಾಡುವ ಸೌಜನ್ಯ ರಾಷ್ಟ್ರೀಯ ಮಾಧ್ಯಮಗಳು ತೋರಲಿಲ್ಲ.

ಖರ್ಗೆಯವರು ದಕ್ಷಿಣ ಭಾರತೀಯರಾದರೂ ಅವರಿಗೆ ಹಿಂದಿ ಮತ್ತು ಉರ್ದು ಭಾಷೆಗಳ ಮೇಲೆ  ಹಿಡಿತ ಇದೆ.  ಆದರೂ ರಾಷ್ಟ್ರೀಯ ಮಾಧ್ಯಮಗಳು ಅವರ ಭಾಷಣ ಕಡೆಗಣಿಸಿವೆ. ಇದಕ್ಕೆ ಅವರು ದಲಿತರೆಂಬುದು ಮುಖ್ಯ ಕಾರಣ ಇರಬಹುದೇ?

ನಮ್ಮ ಕರ್ನಾಟಕದ ಮಾಧ್ಯಮಗಳಿಗೂ ಖರ್ಗೆಯವರ ಭಾಷಣಕ್ಕಿಂತ ತಮಿಳುನಾಡಿನಲ್ಲಿ ಶಶಿಕಲಾ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಎಂಬುದು ಮುಖ್ಯವಾಗಿತ್ತು. ಬಿಜೆಪಿ ನಾಯಕರು ಒಂದುವೇಳೆ ಖರ್ಗೆಯವರಷ್ಟೇ ಪರಿಣಾಮಕಾರಿ ಭಾಷಣ ಮಾಡಿದ್ದರೆ ಮಾಧ್ಯಮಗಳ ನೀತಿ ಹೀಗೆಯೇ ಇರುತ್ತಿತ್ತೇ?
–ರಾಮಕೃಷ್ಣ ಕುಲಾಲ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.