ADVERTISEMENT

ಧರ್ಮದ ಹಾದಿ

ಎಚ್.ಕೆ.ಶರತ್
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಧರ್ಮದ ಹಾದಿಯಲಿ
ಸಾಗಲು ಹೊರಟವರು
ನಡೆದಲ್ಲೆಲ್ಲ
ಸಮಾಧಿಗಳನ್ನು
ಕಟ್ಟುತ್ತಲೇ ಇದ್ದಾರೆ.
ಅಂತಃಕರಣದ ಬೀದಿಯಲಿ
ಬದುಕುಳಿದವರು
‘ಮನುಷ್ಯ’
ತನ್ನೊಳಗಿನ ಧರ್ಮ
ಅರಿಯಲಾಗದೆ
ನರಳುವುದ ಕಂಡು
ಅಳುವೇ ಆದ ನಗು
ನಗುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.