ADVERTISEMENT

ಧೈರ್ಯಗೆಡದಿರಿ

ಪದ್ಮಾ ಕೃಷ್ಣಮೂರ್ತಿ
Published 23 ಮೇ 2016, 19:30 IST
Last Updated 23 ಮೇ 2016, 19:30 IST

ಇತ್ತೀಚೆಗೆ ತಾಯಿಯೊಬ್ಬಳು, ಎಸ್ಎಸ್ಎಲ್‌ಸಿಯಲ್ಲಿ ಮಗಳು ಫೇಲಾದಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳೆಂಬ ಸುದ್ದಿಯನ್ನು ಓದಿ ದುಃಖವಾಯಿತು.

ಈಗ ತಾಯಿಯನ್ನು ಕಳೆದುಕೊಂಡ ಆ ಫೇಲಾದ ಮಗಳ ಗತಿಯೇನು? ಮಕ್ಕಳು ಹೆದರಿ ಆತ್ಮವಿಶ್ವಾಸ ಕಳೆದುಕೊಂಡರೆ ಪೋಷಕರು ಅವರಿಗೆ ಧೈರ್ಯ ತುಂಬಿ ಮುನ್ನಡೆಸಬೇಕು. ಪೋಷಕರೇ ಮಾನಸಿಕ ಸ್ಥೈರ್ಯ ಕಳೆದುಕೊಂಡರೆ ಮಕ್ಕಳ ಸ್ಥಿತಿ ಏನಾಗಬಹುದು?

ಕೇವಲ ಪರೀಕ್ಷೆಯಲ್ಲಿ ಪಾಸಾದರೆ ಸಾಲದು. ಅದೇ ಕೊನೆಯಲ್ಲ, ಬದುಕಲ್ಲ. ಮತ್ತೆ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಪಾಸಾಗಿ ಗುರಿ ಇಟ್ಟರೆ ಐಎಎಸ್‌ ಪರೀಕ್ಷೆಯನ್ನೇ ಬರೆಯಬಹುದು. ಹೆತ್ತವರು ವಿವೇಕ, ವಿವೇಚನೆ ಕಳೆದುಕೊಳ್ಳದೆ ಮಕ್ಕಳಿಗಿರುವ ಬೇರೆಬೇರೆ ಅವಕಾಶಗಳನ್ನು ಹುಡುಕಬೇಕು.

ಮಕ್ಕಳು ಫೇಲಾದ ಸಂದರ್ಭದಲ್ಲೇ ಅವರಿಗೆ ಪೋಷಕರ ಬೆಂಬಲ, ಸಹಕಾರ, ಪ್ರೀತಿ ಬೇಕಾಗುತ್ತದೆ ಎಂಬುದನ್ನು  ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.