ADVERTISEMENT

ನಿರ್ಬಂಧವಿರಲಿ

ರಾಜಶೇಖರ ಸಿ.ಡಿ.
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

‘ಪಟಾಕಿ ನಿಷೇಧಕ್ಕೆ ಹಸುಳೆಗಳ ಒತ್ತಾಯ’ (ಪ್ರ.ವಾ., ಅ. 1) ಓದಿ ಆಶ್ಚರ್ಯವೆನಿಸಿದರೂ ನೈಜತೆಯ ಅರಿವಾಯಿತು. ನಮ್ಮ ದೇಶದ ಕಾನೂನುಗಳು ಸಾರ್ವಜನಿಕ ಸುರಕ್ಷೆ, ಆರೋಗ್ಯ ಮತ್ತು ನೈತಿಕತೆಯ ಪರವಾಗಿಯೇ ಇದ್ದರೂ ಕೆಲವು ಆಚರಣೆಗಳ ಮೇಲೆ ನಿಷೇಧ ಹೇರದಿರುವುದು ವಿಪರ್ಯಾಸ.

ಪಟಾಕಿ ಸಿಡಿಸುವಿಕೆಯಿಂದ ಹಲವಾರು ಮಕ್ಕಳು ಕಣ್ಣು, ಕಿವಿ ಮುಂತಾದ ಅಂಗಾಂಗಗಳನ್ನಷ್ಟೇ ಅಲ್ಲದೆ ಅಮೂಲ್ಯ ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಪಟಾಕಿಗಳಿಂದ ಹೊರಹೊಮ್ಮುವ ಸದ್ದಿನೊಂದಿಗೆ ಪರಿಸರದಲ್ಲಿ ಹರಡಿಕೊಂಡ ರಾಸಾಯನಿಕಗಳು ಮನುಷ್ಯ, ಪ್ರಾಣಿ, ಪಕ್ಷಿಗಳ ಆರೋಗ್ಯಕ್ಕೂ ಕುತ್ತು ತರುತ್ತವೆ. ಹೀಗಿರುವಾಗ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವ ಆಚರಣೆಯನ್ನು ನಿಷೇಧಿಸಲು ಒತ್ತಾಯಿಸುವುದು ಸರಿ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.