ADVERTISEMENT

ನಿಲ್ದಾಣದಲ್ಲಿ ಗ್ರಂಥಾಲಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST

ಬಹಳಷ್ಟು ಜನ ಇಂದು ತಮ್ಮ ಸುಖಕರ ಪ್ರಯಾಣಕ್ಕೆ ರೈಲನ್ನು ಅವಲಂಬಿಸಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಅವರು ರೈಲಿಗಾಗಿ ಕಾಯುತ್ತಾ ನಿಲ್ದಾಣಗಳಲ್ಲಿ ಕಳೆಯಬೇಕಾಗುತ್ತದೆ.

ಇಂತಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯ ರೈಲು ನಿಲ್ದಾಣಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಅಲ್ಲಿ ಕಂಪ್ಯೂಟರ್‌, ಅಂತರ್ಜಾಲ ಸೇವೆ ಒದಗಿಸಿದರೆ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಉಪಯೋಗವಾಗುತ್ತದೆ. ಓದುವ ಅಭಿರುಚಿ ರೂಢಿಸಿಕೊಳ್ಳಲು ನೆರವಾಗುತ್ತದೆ.

ಇದು ಒಂದೆಡೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ. ಮತ್ತೊಂದೆಡೆ ಜ್ಞಾನಾಭಿವೃದ್ಧಿಗೆ  ವೇದಿಕೆಯಾಗಿಯೂ ಕೆಲಸ ಮಾಡುತ್ತದೆ.
-ಡಾ. ಬಸವರಾಜ್ ಎನ್. ಅಕ್ಕಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.