ADVERTISEMENT

ಪರಿಹಾರ ಘೋಷಿಸಲಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಐವತ್ತೋ ಅರವತ್ತೋ ಹೆಣಗಳನ್ನು ಬೀಳಿಸಿ ಅದರ ಮೇಲೆ ಘೋರಿ ಕಟ್ಟುವಂತೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಹಲ್ಲುಕಿತ್ತ ಹಾವಿನಂತಿರುವ ಈ ಮಸೂದೆ ಮಂಡಿಸಲು ಇಷ್ಟು ಜನರ ಬಲಿ ಬೇಕಿತ್ತೇ? ಆ ಅಮಾಯಕರ ಸಾವಿನ ಜವಾಬ್ದಾರಿ ಹೊತ್ತುಕೊಳ್ಳಲು ಸರ್ಕಾರವಾಗಲೀ ವೈದ್ಯರಾಗಲೀ ಸಿದ್ಧರಿಲ್ಲ.

ಇವರ ಸಾವಿಗೆ ನಿಜವಾದ ಕಾರಣ ಹುಡುಕಬೇಕು. ಚಿಕಿತ್ಸೆ ಸಿಗದ ಕಾರಣಕ್ಕೆ ಸತ್ತರೇ ಎಂಬುದರ ಬಗ್ಗೆ ತನಿಖೆಯಾಗಬೇಕಾದ ಅವಶ್ಯಕತೆ ಇದೆ. ಸತ್ತವರ ಕುಟುಂಬದವರಿಗೆ  ಪರಿಹಾರ ಒದಗಿಸಬೇಕಾದುದು ಸರ್ಕಾರದ ಕರ್ತವ್ಯ.
–ಗಂಗಾಧರ ಅಂಕೊಲೇಕರ
ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT