ADVERTISEMENT

ಬಣ್ಣಗಳ ಹಾವಳಿ ಬೇಡ

ಶ್ರುತಿ, ಮೈಸೂರು
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ಹೋಳಿ ಎಲ್ಲ ವರ್ಗದವರೂ ಆಚರಿಸಿ ಸಂಭ್ರಮಪಡುವ ಹಬ್ಬ.  ಕೆಲವರು ಅದರ ಮಹತ್ವ ತಿಳಿಯದಿದ್ದರೂ ಆಚರಿಸು­ತ್ತಾರೆ. ಬಣ್ಣ ಭಾವನೆಗಳ ಸಂಕೇತ. ಆದರೆ ಹೋಳಿ ಸಂದರ್ಭ­ದಲ್ಲಿ ಇಷ್ಟ ಇಲ್ಲದಿರುವವರಿಗೂ ಕೆಲವರು ಬಣ್ಣವನ್ನು ಮೈಮೇಲೆ ಎರಚಲು  ಬರುವುದು ಸಭ್ಯತನವಲ್ಲ.

ಅಷ್ಟೇ ಅಲ್ಲದೆ ಕೆಲವರು ಟೊಮೆಟೊ, ಮೊಟ್ಟೆಯನ್ನು ಸಹ ಬಳಸಿ ಹೋಳಿ ಆಚರಿಸುತ್ತಾರೆ. ಇವುಗಳನ್ನು ಹಿಂದೆಲ್ಲ ತಪ್ಪು ಮಾಡಿದವರನ್ನು ಅವಮಾನಿಸಲು ಬಳಸುತ್ತಿದ್ದರು. ಹೀಗಾಗಿ ಯಾವ ವಸ್ತುವಿಗೆ ಎಂತಹ ಬೆಲೆ ಇದೆ ಎಂಬುದನ್ನು ಅರಿತುಕೊಂಡು ಬಳಸಬೇಕು.

ಬಣ್ಣವನ್ನು ಮೈಕೈಗೆ ಹಾಕಿದರೆ ಸರಿ. ಅದು ಬಿಟ್ಟು ಕಿವಿ, ಕಣ್ಣು, ಮೂಗು, ಕೂದಲು, ತಲೆಯ ಮೇಲೆಲ್ಲ ಹಾಕಿದರೆ ಅದರಲ್ಲಿರುವ ವಿಷಕಾರಿ ವಸ್ತುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೆಣ್ಣು ಮಕ್ಕಳು ಇಂತಹ ಕೃತ್ಯಗಳಿಗೆ ಅಂಜಿ ಹೋಳಿ ಹಬ್ಬದ ದಿನ ಕಾಲೇಜು ಮತ್ತು ಕೆಲಸಕ್ಕೆ  ರಜೆ ಹಾಕುವುದು ಸಾಮಾನ್ಯವಾಗಿದೆ.

ನೀರಿಗೆ ಬಣ್ಣವನ್ನು ಮಿಶ್ರ ಮಾಡಿ ಮೈಮೇಲೆ ಹಾಕುವುದು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಬಣ್ಣಗಳ ಹಾವಳಿ ಮಿತಿಮೀರದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.