ADVERTISEMENT

ಬಸ್‌ ಒಳಗೆ ನೀರು ನುಗ್ಗಿದಾಗ...

ಕುಂದು ಕೊರತೆ

ಡಾ.ಎಲ್.ಶಶಿಕುಮಾರ್
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ನಾನು ಇತ್ತೀಚೆಗೆ ನಗರದ ಮಡಿವಾಳದಿಂದ ಸಂಜೆ ಕೆಲಸ ಮುಗಿಸಿಕೊಂಡು ಬನಶಂಕರಿಗೆ ಪ್ರಯಾಣ ಮಾಡಲು ರೂಟ್‌ ನಂ. 215 ಜೆ (ವಾಹನ ಸಂಖ್ಯೆ ಕೆಎ 01 ಎಫ್– 9532) ಬಸ್ಸನ್ನು ಹತ್ತಿ ಹಿಂಬದಿ ಸೀಟಿನಲ್ಲಿ ಕುಳಿತೆ. ಬಸ್ಸು ಸಿಲ್ಕ್ ಬೋರ್ಡ್‌ಗೆ ಬರುವಷ್ಟರಲ್ಲಿ ಮಳೆ ಆರಂಭವಾಯಿತು. ಕೆಲವೇ ನಿಮಿಷಗಳಲ್ಲಿ ಮಳೆನೀರು ಬಸ್ಸಿನ ಕಿಟಕಿಗಳ  ಮೂಲಕ ಒಳಗೆ ಸುರಿದು ಒಮ್ಮೆಲೆಯೇ ನಾನು ಮತ್ತು ಅಕ್ಕಪಕ್ಕದವರು ಕುಳಿತಿದ್ದ ಸೀಟುಗಳನ್ನು ಆಕ್ರಮಿಸಿತು. ಇದರಿಂದ ನಾವೆಲ್ಲರೂ ಬಸ್ಸಿನಲ್ಲಿ ಎದ್ದು ನಿಲ್ಲಬೇಕಾದ ಪರಿಸ್ಥಿತಿ ಬಂದಿತು.

ಬಸ್ಸಿನ ಹಿಂಭಾಗದಲ್ಲಿನ ಎಡಬದಿಯ ಎರಡು ದೊಡ್ಡ ಗಾಜಿನ ಕಿಟಕಿಗಳು  ಒಡೆದಿದ್ದೇ ಇದಕ್ಕೆ ಕಾರಣ. ಆ ಜಾಗದಲ್ಲಿ ಸಾರಿಗೆ ಸಂಸ್ಥೆಯವರು ಹಾಕಿದ್ದ ಪ್ಲಾಸ್ಟಿಕ್‌ ಶೀಟ್‌ಗಳು ಸಹ ಕಿತ್ತುಹೋಗಿ ಮಳೆ ನೀರು ಒಳಗೆ ಪ್ರವೇಶಿಸಿತ್ತು. ಬಸ್ಸಿನಲ್ಲಿ ಸೀಟಿದ್ದರೂ ನಾನು ನಿಂತುಕೊಂಡೇ ಬನಶಂಕರಿಯವರೆಗೂ ಪ್ರಯಾಸದಿಂದ ಪ್ರಯಾಣ ಮಾಡಿದೆ. ಇದಲ್ಲದೆ ಹಲವಾರು ವೃದ್ಧರು, ಮಕ್ಕಳು ಹಾಗೂ ಅನೇಕ ಪ್ರಯಾಣಿಕರು ಸಹ ಈ ಪರಿಸ್ಥಿತಿಯಿಂದ ಪ್ರಯಾಣದಲ್ಲಿ ಬಹಳಷ್ಟು ತೊಂದರೆ ಪಡುವಂತಾಯಿತು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರು ನಗರ ಸಾರಿಗೆ ಬಸ್ಸಿನಲ್ಲಿ ಸುಖಕರ ಪ್ರಯಾಣ ಮಾಡುವಂತಹ ವಾತಾವರಣ ನಿರ್ಮಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.