ADVERTISEMENT

ಬಸ್ ನಿಲ್ದಾಣ ಬದಲಿಸಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST
ಬಸ್ ನಿಲ್ದಾಣ ಬದಲಿಸಿ
ಬಸ್ ನಿಲ್ದಾಣ ಬದಲಿಸಿ   

ಹೆಬ್ಬಾಳ ಮೇಲುಸೇತುವೆಯ ಕೆಳಭಾಗದಿಂದ ರಿಂಗ್‌ ರಸ್ತೆಯಲ್ಲಿ ಚಲಿಸುವ ಬಸ್‌ಗಳಿಗೆ ಹೋಗಬೇಕಾದರೆ (ಯಲಹಂಕದಿಂದ ಬರುವವರು) ಹೆಬ್ಬಾಳ ಬಸ್‌ ನಿಲ್ದಾಣದಲ್ಲಿ ಇಳಿದು ಅಲ್ಲಿಗೆ ಹೋಗಬೇಕಾಗುತ್ತದೆ. ಇದರಿಂದ ಮಹಿಳೆಯರು, ಮಕ್ಕಳು ವೃದ್ಧರು ಹಾಗೂ ಅಂಗವಿಕಲರಿಗೆ ಬಹಳ ತೊಂದರೆಯಾಗಿದೆ.

ಆದುದರಿಂದ ಬೆಳಗಿನ ಸಮಯದಲ್ಲಿನ ಬಿಎಂಟಿಸಿ ಬಸ್ಸುಗಳು ರಿಂಗ್‌ರಸ್ತೆಯಲ್ಲಿಳಿದು ಹಾಗೆಯೇ ಹೆಬ್ಬಾಳ ಮುಖ್ಯ ರಸ್ತೆಗೆ ಹೋದಲ್ಲಿ ವಿವಿಧ ಕಚೇರಿ ಕಂಪನಿಗಳಿಗೆ ಹೋಗುವ ನೌಕರರು ಇತರರಿಗೆ ಬಹಳ ಉಪಕಾರವಾಗುತ್ತದೆ.
–ರಾಂನಗರ ದೇವ್ರಾಜ್‌, ಎಂ. ಮಲ್ಲೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.