ADVERTISEMENT

ಬಿ.ಇಡಿ. ಅವಧಿ ಇಳಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST

ಬಿ.ಇಡಿ. ಕೋರ್ಸ್‌ ಅವಧಿಯನ್ನು ಕರ್ನಾಟಕ ಸರ್ಕಾರ 2015–16ನೇ ಸಾಲಿನಿಂದ ಎರಡು ವರ್ಷಕ್ಕೆ ಏರಿಸಿದೆ. ಇದು ನಿಜವಾಗಿಯೂ ಅಗತ್ಯವಾಗಿತ್ತೇ?

ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕ ಆಗಬಯಸುವವರಿಗೂ ಈ ಕೋರ್ಸ್‌ ಕಡ್ಡಾಯ ಮಾಡಲಾಗಿದ್ದು, ವಿಧಿಯಿಲ್ಲದೆ ಕಲಿಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋರ್ಸ್‌ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ವಿಸ್ತರಣೆ ಮಾಡಿದ್ದರೂ, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮಹಾರಾಷ್ಟ್ರದಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ  ಬಿ.ಇಡಿ. ಕೋರ್ಸ್‌ ಅವಧಿಯನ್ನು ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸಲಾಗಿದೆ. ಇದನ್ನೆಲ್ಲ ನಮ್ಮ ಸರ್ಕಾರ ಗಮನಿಸಿ, ಅವಧಿ ಪರಿಷ್ಕರಣೆಗೆ ಚಿಂತನೆ ನಡೆಸಲಿ.
-ಹನುಮೇಶ್, ಭೀಮನಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.