ADVERTISEMENT

ಭತ್ಯೆ ವಿಳಂಬ ಸಲ್ಲದು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಮೇ 2016, 19:30 IST
Last Updated 5 ಮೇ 2016, 19:30 IST

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದು ಒಂದು ವಾರ ಕಳೆದರೂ ಇನ್ನೂ ಮೌಲ್ಯಮಾಪಕರಿಗೆ ಬರಬೇಕಾದ ಭತ್ಯೆ ಬಂದಿಲ್ಲ. ಪ್ರತಿ ವರ್ಷ ಕೊನೆಯ ದಿನದಂದೆ ಚೆಕ್‌ ವಿತರಿಸುತ್ತಿದ್ದರು. ಈ ವರ್ಷ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದು ಖಾತೆ ಸಂಖ್ಯೆ ಪಡೆದಿದ್ದಾರೆ.

ಯಾವಾಗ ಹಣ ಬರುವುದೋ ಎಂಬ ಚಿಂತೆ ಅನುದಾನ ರಹಿತ, ಅನುದಾನಿತ ಶಾಲೆಯ ಶಿಕ್ಷಕರದ್ದಾಗಿದೆ.  ಅವರ ವೇತನವೂ ತಿಂಗಳಿಗೆ ಸರಿಯಾಗಿ ಆಗುವುದಿಲ್ಲ. ಈ ಹಣ ಬರುವುದೂ ವಿಳಂಬವಾಗಿದೆ. ಪ್ರೌಢ ಶಿಕ್ಷಣ ಮಂಡಳಿ ಶಿಕ್ಷಕರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.