ADVERTISEMENT

ಭವ್ಯ ಗ್ರಾಮ ಸಾಕು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ನಮ್ಮ ತಾಲ್ಲೂಕಿನ ಗ್ರಾಮಗಳಲ್ಲಿ ಇಂಗ್ಲಿಷ್ ಶಾಲೆಗಳು, ಇಟ್ಟಿಗೆ ಕಾರ್ಖಾನೆಗಳು ಬೇಡ. ಅವುಗಳ ಬದಲಾಗಿ ಎಲ್ಲ ಗ್ರಾಮಗಳಿಗೂ ಒಂದೊಂದು ಶಾಲೆ, ಆಸ್ಪತ್ರೆ ನಿರ್ಮಿಸಿ ಕೊಡಿ. ಬಡವರು, ನಿರ್ಗತಿಕರಿಗೆ ವಾಸಿಸಲು ಮನೆ ನಿರ್ಮಿಸಿ ಕೊಡಿ. ಎಲ್ಲ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡಿ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಿದ್ದಾರೆ.

ಅವರಿಗೆ ಶೌಚಾಲಯ ನಿರ್ಮಿಸಿ ಕೊಡಿ. ಪಶು ಸಂಗೋಪನೆಗೆ ಉತ್ತೇಜನ ಕೊಡಿ. ಗ್ರಾಮಗಳಲ್ಲಿ ಪ್ರತಿ ಮನೆ ಮುಂದೆ ಎರಡು ಸಸಿ, ರಸ್ತೆಗಳ ಬದಿಯಲ್ಲಿ, ತೋಟಗಳಲ್ಲಿ ಹಾಗೂ ಬೆಟ್ಟಗುಡ್ಡಗಳಲ್ಲಿ ಗಿಡ ಬೆಳೆಸಲು ಪ್ರೋತ್ಸಾಹಿಸಿ. ರೈತರ ಸಾಲ ಮನ್ನಾ ಮಾಡಿ. ರೈತಾಪಿ ಮಕ್ಕಳಿಗೆ ಉದ್ಯೋಗ ಕಲ್ಪಿಸಿ.

ಯರ‍್ರಾ ಕವಿ, ಪಾವಗಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.