ADVERTISEMENT

ಮಂಗಳಾರತಿ ಮರೆತರೇ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST

‘ಗುರ್‌ಮೆಹರ್‌ ಹಾಗೂ ಕಾಮಾಲೆ ಕಣ್ಣು’ ಎಂಬ ಕ್ಯಾಪ್ಟನ್‌ ಗೋಪಿನಾಥ್‌ ಅವರ ಲೇಖನ (ಸಂಗತ, ಮಾರ್ಚ್‌ 7) ಅತ್ಯಂತ ಸಮಯೋಚಿತವಾಗಿದೆ.
ಗುರ್‌ಮೆಹರ್‌ ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುವವರು ಜಿಂಕೆಯನ್ನು ಹರಿದು ತಿನ್ನುವ ಕಾಡಿನ ಕತ್ತೆಕಿರುಬಗಳನ್ನು ನೆನಪಿಸಿದ್ದು ಸ್ವಾಭಾವಿಕ.

ಕಾಡಿನ ಕತ್ತೆಕಿರುಬಗಳು ತಮ್ಮ ಹೊಟ್ಟೆಪಾಡಿಗಾಗಿ ಬೇಟೆಯಾಡುತ್ತವೆ. ಆದರೆ ದೆಹಲಿಯ ಹೊಟ್ಟೆತುಂಬಿದ ಕತ್ತೆಕಿರುಬಗಳು ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಲಿಕ್ಕೆ, ತಮ್ಮ ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳೆಂದು ಬಿಂಬಿಸಲಿಕ್ಕೆ, ಮೂಲಭೂತ ಹಕ್ಕುಗಳ ದಮನಕ್ಕೆ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಸರ್ವಾಧಿಕಾರವನ್ನು ಸ್ಥಾಪಿಸಲಿಕ್ಕೆ ಬೇಟೆಯಾಡುತ್ತಿವೆ.

ಕಳೆದ ಚುನಾವಣೆಯಲ್ಲಿ  ಪ್ರಮುಖ ರಾಜಕೀಯ ಪಕ್ಷಗಳಿಗೆ ದೆಹಲಿಯ ಜನ ಮಾಡಿದ ಮಂಗಳಾರತಿಯನ್ನು ನಾಯಕರು ಮರೆತಿದ್ದಾರೆ.
-ಡಾ. ವಿ.ಬಿ.ಯಲಬುರ್ಗಿ,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.