ADVERTISEMENT

ಮನೆಯಲ್ಲೇ ‘ಸಹಪಂಕ್ತಿ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
‘ನಮ್ಮ ನಡೆ ಅಸ್ಪೃಶ್ಯತೆ ನಿವಾರಣೆ ಕಡೆ, ಅಸ್ಪೃಶ್ಯತೆ ನಿವಾರಣೆಗಾಗಿ ಸಹಪಂಕ್ತಿ ಬೋಜನ’ ಎಂಬ ಘೋಷಣೆಯೊಂದಿಗೆ ಮೇಲ್ಜಾತಿಗಳ ಕೆಲವರು ಹಾಗೂ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿರುವುದನ್ನು ಇತ್ತೀಚೆಗೆ ಗಮನಿಸುತ್ತಿದ್ದೇವೆ. 
 
ಇವರು ನಡೆಸುವ ಸಹಪಂಕ್ತಿ ಭೋಜನಗಳಾಗಲೀ ಪಾದಯಾತ್ರೆಗಳಾಗಲೀ ದಲಿತರ ಮನೆ ಅಥವಾ ಕೇರಿಗಳಲ್ಲೇ ಆಗಿರುತ್ತವೆ. ಇದರ ಬದಲು ಮೇಲ್ವರ್ಗದವರು  ತಮ್ಮ ಮನೆಗಳಲ್ಲೇ ಯಾಕೆ ಸಹಪಂಕ್ತಿ ಭೋಜನ ಏರ್ಪಡಿಸಿ ದಲಿತರನ್ನು ಆಹ್ವಾನಿಸಬಾರದು? ಪಾದಯಾತ್ರೆಯನ್ನು ಕೂಡ ಅವರ ವಠಾರಗಳಲ್ಲೇ ಹಮ್ಮಿಕೊಳ್ಳಬಹುದಲ್ಲವೇ?
ಗುರುಪ್ರಸಾದ್ ಕಂಟಲಗೆರೆ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.