ADVERTISEMENT

ಮಳೆಗೆ ಸಜ್ಜಾಗಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಮೇ 2016, 19:30 IST
Last Updated 23 ಮೇ 2016, 19:30 IST

ಪ್ರತಿವರ್ಷ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಮಲೆನಾಡಿನಲ್ಲಿ ಕಗ್ಗತ್ತಲಿನ ರಾತ್ರಿಗಳು ನೆನಪಾಗುತ್ತವೆ. ಕಾಫಿ ತೋಟ, ದಟ್ಟ ಅರಣ್ಯದ ನಡುವೆ ಹಾದುಹೋಗಿರುವ ಹಳೆ ಕಾಲದ ತುಕ್ಕು ಹಿಡಿದ ವಿದ್ಯುತ್ ತಂತಿಗಳ ಮೇಲೆ ಮರ ಬೀಳುವುದು,

ಅದರಿಂದಾಗಿ ತಂತಿ ಕಡಿತಗೊಂಡ ಜಾಗವನ್ನು ಮೆಸ್ಕಾಂ ಸಿಬ್ಬಂದಿ ಹುಡುಕುತ್ತಾ ಹೋಗುವುದು, 10-15 ದಿನಗಳ ನಂತರ ಲೈನ್ ಸರಿಯಾಗಿ ‘ಕತ್ತಲಿನಿಂದ ಬೆಳಕಿನೆಡೆಗೆ’ ಎಂಬಂತೆ ದೀಪ ಉರಿಯುವುದು ಸಾಮಾನ್ಯ.

ಯಾವ ಮರ ಯಾವಾಗ ಬೀಳುತ್ತದೆ ಎಂದು ಊಹಿಸುವುದು ಕಷ್ಟವಾದರೂ, ವಿದ್ಯುತ್ ಲೈನ್‌ನ ಮಾರ್ಗದಲ್ಲಿ ಇರುವ ಒಣ ಮರಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ಕಡಿಯುವುದು ಒಳ್ಳೆಯದು. ಇದರಿಂದ ಮೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಹರಸಾಹಸಪಡುವುದು ಮತ್ತು ಸಾರ್ವಜನಿಕರು ಪರಿತಪಿಸುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT