ADVERTISEMENT

ಮಸೂದೆ ಬಗ್ಗೆ ಚರ್ಚೆ ಆಗಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಮೋಟಾರು ವಾಹನ ತಿದ್ದುಪಡಿ ಮಸೂದೆ– 2016ರ ಸಂಬಂಧ, ‘ಅಂತರಾಳ’ ಪುಟ (ಪ್ರ.ವಾ., ಏ. 22) ಹೆಚ್ಚು ಉಪಯಕ್ತ ಹಾಗೂ ಸಮಯೋಚಿತವಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತ ವಿಪರೀತ ಹೆಚ್ಚು ಮಾಡಲಾಗಿದೆ. ಈ ಕ್ರಮವು ‘ಕಿರುಕುಳ’, ‘ಕಿರಿಕಿರಿ’ ಹಾಗೂ ‘ಭ್ರಷ್ಟಾಚಾರ’ ಹೆಚ್ಚು ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಮಸೂದೆಯಲ್ಲಿನ ಸೆಕ್ಷನ್‌ 199ರ ಅನ್ವಯ, 18 ವರ್ಷ ವಯಸ್ಸಿನ ಒಳಗಿನವರು ನಿಯಮ ಉಲ್ಲಂಘಿಸಿದರೆ  ದಂಡ, ಜೈಲು ಶಿಕ್ಷೆ ಮತ್ತು ವಾಹನ ನೋಂದಣಿ ರದ್ದು ಮಾಡುವ ಉದ್ದೇಶ ಹಾಗೂ ಅಂಥ ಬಾಲಕನ ಪಾಲಕರು ಅಥವಾ ವಾಹನ ಮಾಲೀಕರು ಇದಕ್ಕೆ ಹೊಣೆಗಾರರಾಗುತ್ತಾರೆ ಎಂಬುದು ಕರಾಳ ತಿದ್ದುಪಡಿ.

ಈಗಿನ ಹುಡುಗ–ಹುಡುಗಿಯರು ಪೋಷಕರ ವಾಹನಗಳನ್ನು ಅವರಿಗೆ ಗೊತ್ತಿಲ್ಲದೆ ತೆಗೆದುಕೊಂಡು ಹೋಗಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಪೋಷಕರನ್ನು ಹೊಣೆಗಾರರನ್ನಾಗಿ ಮಾಡಿ, ಅವರಿಗೆ ದಂಡ ಮತ್ತು ಜೈಲುಶಿಕ್ಷೆ ನೀಡಲು ಹೊರಟಿರುವುದು ಮೂರ್ಖತನದ ಪರಮಾವಧಿ.

ADVERTISEMENT

ಕೇಂದ್ರ ಸರ್ಕಾರ ದುಡುಕಬಾರದು. ಈ ಉದ್ದೇಶಿತ ಮಸೂದೆ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕು.

–ಕೆ.ಟಿ. ತಿಮ್ಮಾರೆಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.