ADVERTISEMENT

ಮುಂಜಾಗ್ರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ಶ್ರವಣಬೆಳಗೊಳದ ಗೊಮ್ಮಟೇಶ್ವರ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವು ಫೆಬ್ರುವರಿ ತಿಂಗಳಿನಲ್ಲಿ ಏರ್ಪಡಲಿದೆ. 70 ದಿನಗಳು ಮಾತ್ರ ಬಾಕಿಯಿದ್ದು, ಸರ್ಕಾರ ಮತ್ತು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಕಟಿಸಿದ ಯೋಜಿತ ಕಾಮಗಾರಿಗಳು ಪೂರ್ಣಗೊಳ್ಳುವುದು ಸಂದೇಹಾಸ್ಪದ. ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಕಾಮಗಾರಿಗಳು ಶೇ 70ರಷ್ಟು ಮುಗಿದಿದ್ದರೂ ಅಟ್ಟಣಿಗೆ ನಿರ್ಮಾಣ, ಅಲಂಕಾರ ಪ್ರಕ್ರಿಯೆ ಆಮೆಗತಿ ‘ಪ್ರಗತಿ’ಯಲ್ಲಿವೆ!

ಸಹಸ್ರಾರು ಭಕ್ತವೃಂದ, ಪ್ರವಾಸಿಗರ ತಂಡೋಪತಂಡ ಹಾಗೂ ಯಾತ್ರಾರ್ಥಿಗಳ ಸುರಕ್ಷತೆ ಕುರಿತು ವಿಶೇಷ ನಿಗಾ ವಹಿಸಿದಂತಿಲ್ಲ. ಜಿಲ್ಲಾಡಳಿತವು ಸ್ವಚ್ಛತೆ, ಕಾನೂನು ಸುವ್ಯವಸ್ಥೆ ಕುರಿತು ಸ್ಪಷ್ಟ ಕ್ರಮ ಜರುಗಿಸುತ್ತಿಲ್ಲವೆನ್ನಲಾಗಿದೆ. ಸಿ.ಸಿ. ಟಿ.ವಿ. ಕ್ಯಾಮೆರಾ, ವರ್ಚುವಲ್ ವೀಕ್ಷಣೆ, ಬೃಹತ್ ಟಿ.ವಿ. ಪರದೆ ಬಗ್ಗೆ ಮಾತ್ರ ಪ್ರಕಟಣೆಗಳು ಹೊರಬಿದ್ದಿವೆ. ಕಿಸೆಗಳ್ಳರ ಹಾವಳಿ, ವಾಹನ ದಟ್ಟನೆಯ ಗೊಂದಲ, ಆಕಸ್ಮಿಕ ಅವಘಡ ಪ್ರತಿಬಂಧಕ ಕ್ರಮಗಳ ಬಗ್ಗೆ ವಿಶೇಷ ಮುಂಜಾಗ್ರತೆ ವಹಿಸುವುದು ಅಗತ್ಯ.

ಐ.ಪಿ.ಎಸ್. ಯುವ ಅಧಿಕಾರಿಗಳ ತಂಡವೊಂದನ್ನು 2–3 ತಿಂಗಳ ಅವಧಿಗೆ ಸರ್ಕಾರ ನಿಯೋಜಿಸಲಿ. ಧಾರ್ಮಿಕ ವಿಧಿ ವಿಧಾನಗಳು ನಿರಾತಂಕವಾಗಿ ನೆರವೇರುವಂತಾಗಲಿ.
-ಬಿ. ಕರುಣಾಕರ, ಚೆನ್ನರಾಯಪಟ್ಟಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.